ಕರ್ನಾಟಕ

karnataka

ETV Bharat / state

ಕೇರಳದಲ್ಲಿ ಪ್ರತಿಭಟನೆ ಬಿಸಿ: ರಾಜ್ಯಕ್ಕೆ ವಾಪಸ್​ ಆಗಲಿರುವ ಸಿಎಂ ಬಿಎಸ್​ವೈ! - ಸಿಎಂ ಬಿಎಸ್​ವೈ ರಾಜ್ಯಕ್ಕೆ ವಾಪಾಸ್​

ಕೇರಳದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ತೆರಳಿದ್ದ ಬಿಎಸ್​ವೈಗೆ ಪ್ರತಿಭಟನಾಕಾರರ ಬಿಸಿ ಜೋರಾಗಿ ತಟ್ಟಿದೆ. ಹೀಗಾಗಿ ಒಂದು ದಿನ ಮುಂಚಿತವಾಗಿ ರಾಜ್ಯಕ್ಕೆ ವಾಪಸ್​ ಆಗುತ್ತಿದ್ದಾರೆ.

bs yadiyurappa
ಪ್ರತಿಭಟನೆ ಬಿಸಿಗೆ ರಾಜ್ಯಕ್ಕೆ ವಾಪಾಸ್ಸಾದ​ ಸಿಎಂ ಬಿಎಸ್​ವೈ

By

Published : Dec 24, 2019, 4:43 PM IST

Updated : Dec 24, 2019, 5:09 PM IST

ಬೆಂಗಳೂರು:ವಿಶೇಷ ಪೂಜೆ ಸಲ್ಲಿಸುವುದಕ್ಕಾಗಿ ಕೇರಳಕ್ಕೆ ತೆರಳಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅಲ್ಲಿನ ಪ್ರತಿಭಟನೆ ಬಿಸಿಯಿಂದಾಗಿ ಇಂದು ರಾಜ್ಯಕ್ಕೆ ವಾಪಸ್​ ಆಗುತ್ತಿದ್ದಾರೆ.

ನಿನ್ನೆ ಅನಂತಪದ್ಮನಾಭ ದೇವಸ್ಥಾನದ ಬಳಿ ಪ್ರತಿಭಟನೆ ಬಿಸಿ ಎದುರಿಸಿದ್ದ ಬಿಎಸ್​ವೈಗೆ ಕೇರಳದ ಕಣ್ಣೂರು ಬಳಿ ಇಂದು ಮತ್ತೆ ಪ್ರತಿಭಟನೆ ಬಿಸಿ ತಟ್ಟಿದೆ. ಕಣ್ಣೂರು ಬಳಿಯ ತಳಿಫರಂಭ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಬಿಎಸ್​ವೈ ಕಾರು ಬರುತ್ತಿದ್ದಂತೆ ಗೋ ಬ್ಯಾಕ್ ಯಡಿಯೂರಪ್ಪ ಎಂದು ಘೋಷಣೆ ಕೂಗಿದ್ದಾರೆ.

ಪ್ರತಿಭಟನೆ ಬಿಸಿಗೆ ರಾಜ್ಯಕ್ಕೆ ವಾಪಾಸ್ಸಾದ​ ಸಿಎಂ ಬಿಎಸ್​ವೈ

ನಿನ್ನೆ (ಡಿಸೆಂಬರ್​.23) ರಾತ್ರಿಯಿಂದಲೂ ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಿಎಂಗೆ ಪ್ರತಿಭಟನೆ ಬಿಸಿ ತಟ್ಟುತ್ತಿದ್ದು, ಹೆಜ್ಜೆ ಹೆಜ್ಜೆಗೂ ಸಿಎಂ ಬಿಎಸ್​ವೈಗೆ ಪ್ರತಿಭಟನೆ ಕಾವು ತಟ್ಟುತ್ತಲಿದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ ಕೇರಳದಲ್ಲಿ ವಾಸ್ತವ್ಯ ಹೂಡಬೇಕಿದ್ದ ಸಿಎಂ ರಾತ್ರಿಯೇ ಮಂಗಳೂರಿಗೆ ಬರಲಿದ್ದಾರೆ. ಕೇರಳದ ಬದಲು ಮಂಗಳೂರಿನಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಸಿಎಂ ಕಾರ್ಯಕ್ರಮ ಪಟ್ಟಿ ಪ್ರಕಾರ ನಾಳೆ ಬೆಳಿಗ್ಗೆ ಕೇರಳದಿಂದ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಬೇಕಿತ್ತು.

Last Updated : Dec 24, 2019, 5:09 PM IST

ABOUT THE AUTHOR

...view details