ಕರ್ನಾಟಕ

karnataka

ETV Bharat / state

ರೈತರ ಹೋರಾಟ ದುರುದ್ದೇಶದಿಂದ ಕೂಡಿದೆ: ಸಚಿವ ಬಿ.ಸಿ.ಪಾಟೀಲ್ ಆರೋಪ - B Patil talk against peasant struggle in Bangalore

ರೈತರ ಹೋರಾಟ ಪ್ರಚೋದನೆಯಿಂದ ಕೂಡಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ.

b c-patil-
ಸಚಿವ ಬಿ.ಸಿ.ಪಾಟೀಲ್

By

Published : Sep 22, 2020, 12:31 PM IST

ಬೆಂಗಳೂರು: ರೈತರ ಹೋರಾಟ ದುರುದ್ದೇಶದಿಂದ ಕೂಡಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಅದು ಪ್ರಚೋದನೆಯಿಂದ ಕೂಡಿದ ಹೋರಾಟವಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ನಾನಿನ್ನೂ ರೈತರನ್ನು ಭೇಟಿಯಾಗಿಲ್ಲ. ಭೇಟಿಯಾಗೋ ಬಗ್ಗೆ ಯೋಚನೆ ಮಾಡ್ತೇನೆ. ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಹೆಚ್ಚು ಅನುಕೂಲ ಹಾಗೂ ಲಾಭವಿದೆ. ಸುಮ್ಮನೆ ವಿರೋಧ ವ್ಯಕ್ತಪಡಿಸೋದು ಸರಿಯಲ್ಲ ಎಂದು ಗುಡುಗಿದರು.

ಸಚಿವ ಬಿ.ಸಿ.ಪಾಟೀಲ್

ಎಪಿಎಂಪಿ, ಭೂ ಸುಧಾರಣಾ ಕಾಯ್ದೆಗಳ ವಿಚಾರದಲ್ಲಿ ಸರ್ಕಾರದ ನಿಲುವು ಸರಿಯಿದೆ. ಸರ್ಕಾರ ರೈತರ ಪರವಾಗಿಯೇ ಇದೆ. ಭೂ ಸುಧಾರಣಾ ಕಾಯ್ದೆಯಿಂದ ಎಲ್ಲರಿಗೂ ರೈತರಾಗಲು ಅವಕಾಶ ನೀಡಲಾಗಿದೆ. ಆದರೆ ಈ ಹೋರಾಟಗಾರರು ಅನವಶ್ಯಕವಾಗಿ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಕಿಡಿಕಾರಿದ ಅವರು, ರೈತರಿಗೆ ಅನುಕೂಲವಾಗುವ ಕಾಯ್ದೆ ಇದಾಗಿದೆ. ಇದರಿಂದ ಯಾವುದೇ ಅನಾನುಕೂಲತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details