ಬೆಂಗಳೂರು:ಕೊರೊನಾ ವೈರಸ್ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇತ್ತ ಕೊರೊನಾ ವೈರಸ್ಗೆ ಔಷಧ ಕಂಡು ಹಿಡಿಯಲು ಇಡೀ ವಿಶ್ವವೇ ಸಂಶೋಧನೆ ನಡೆಸುತ್ತಿದೆ. ಇದರ ಜೊತೆಗೆ ಹಲವು ಹೋಮಿಯೋಪಥಿ, ಯುನಾನಿ ಪದ್ಧತಿಗಳಿಂದಲೂ ಕೊರೊನಾಗೆ ಮದ್ದು ಇದೆ ಅಂತ ಹೇಳಲಾಗುತ್ತಿತ್ತು. ಆದರೆ ಕರೋನಾ ಮಹಾಮಾರಿಗೆ ಚಿಕಿತ್ಸೆ ಸಫಲವಾಗುತ್ತೋ ವಿಫಲವಾಗುತ್ತೋ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿತ್ತು.
ಕೊರೊನಾ ವೈರಸ್ಗೆ ಸಿಕ್ಕಿತಾ ಆಯುರ್ವೇದ ಔಷಧ? ICMR ನೀಡುತ್ತಾ ಗ್ರೀನ್ ಸಿಗ್ನಲ್?
ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಅವರು ಕೊರೋನಾಗೆ ಆಯುಷ್ ಪದ್ಧತಿ ಮೆಡಿಸನ್ ನೀಡೋದಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್, ಔಷಧ ಬಳಕೆ ಕುರಿತು ICMRಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಆದರೆ ಇದೀಗ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಅವ್ರು ಕೊರೋನಾಗೆ ಆಯುಷ್ ಪದ್ಧತಿ ಮೆಡಿಸನ್ ನೀಡೋದಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಕಜೆ ಮನವಿಗೆ ಸ್ಪಂದಿಸಿರುವ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್, ಔಷಧ ಬಳಕೆ ಕುರಿತು ICMRಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಬ್ರಾಡ್ ಸ್ಪಕ್ಟ್ರಂ ಆ್ಯಂಟಿ ವೈರಲ್ ಡ್ರಗ್‌ನಿಂದ ಕೊರೋನಾಗೆ ಮದ್ದು ಇದ್ದು, ಪ್ರಸ್ಫೋಟಕ, ಕಿರೋಟೆಟ್ ಸೇರಿದಂತೆ ಹಲವು ಆ್ಯಂಟಿ ಬಯೋಟಿಕ್ ಬಳಸಿ ಮೆಡಿಸನ್ ಸಿದ್ದಪಡಿಸಿಲಾಗಿದೆ. H1N1, ಹೆಪಟೈಟಿಸ್ ಬಿ ಸೇರಿದಂತೆ ಹಲವು ವೈರಸ್ ಖಾಯಿಲೆಗೆ ಬಳಕೆಯಾಗುವ ಆ್ಯಂಟಿ ವೈರಲ್, ಈಗಾಗಲೇ 32 ರಿಸರ್ಚ್ ಪರಿಗಣಿಸಿ ಮೆಡಿಸನ್ ಫಲಿತಾಂಶವನ್ನ ಡಾ. ಕಜೆ ಪಡೆದಿದ್ದಾರೆ. ಸದ್ಯ ICMRನಿಂದ ಒಪ್ಪಿಗೆಗೆ ರಾಜ್ಯ ಸರ್ಕಾರ ಕಾಯುತ್ತಿದೆ. ICMR ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲೇ ಕೊರೋನಾಗೆ ಆಯುರ್ವೇದ ಔಷಧ ಸಿಗಲಿದೆ.