ಬೆಂಗಳೂರು : ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸದಲ್ಲೂ ಹಬ್ಬದ ಕಳೆ ಕಟ್ಟಿದ್ದು, ಸಡಗರದಿಂದ ಸಿಎಂ ವಾಹನಗಳಿಗೆ ಪೂಜಾ ಕಂಕೈರ್ಯ ನೆರವೇರಿಸಿದರು.
ಬಿಎಸ್ವೈ ನಿವಾಸದಲ್ಲಿ ಆಯುಧ ಪೂಜಾ ಸಂಭ್ರಮ : ನಾಡಿನ ಜನತೆಗೆ ಶುಭ ಕೋರಿದ ಸಿಎಂ, ಡಿಸಿಎಂ - DCM Govinda karajola
ಸಿಎಂ ಬಿಎಸ್ವೈ ನಿವಾಸ ಧವಳಗಿರಿಯಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು. ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿಎಂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ವಾಹನ ಹಾಗೂ ಬೆಂಗಾವಲು ಪಡೆ ವಾಹನಗಳಿಗೂ ಪೂಜೆ ಸಲ್ಲಿಕೆ ಮಾಡಿ ಸಿಹಿ ವಿತರಿಸಲಾಯಿತು.
ಡಾಲರ್ಸ್ ಕಾಲೊನಿಯಲ್ಲಿರುವ ಸಿಎಂ ಬಿ. ಎಸ್. ಯಡಿಯೂರಪ್ಪ ನಿವಾಸ ಧವಳಗಿರಿಯಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು. ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿಎಂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ವಾಹನ ಹಾಗೂ ಬೆಂಗಾವಲು ಪಡೆ ವಾಹನಗಳಿಗೂ ಪೂಜೆ ಸಲ್ಲಿಕೆ ಮಾಡಿ ಸಿಹಿ ವಿತರಿಸಲಾಯಿತು. ಹಬ್ಬದ ಸಂಭ್ರಮದಲ್ಲಿರುವ ಸಿಎಂ ಬಿಎಸ್ವೈ ನಾಡಿನ ಜನತೆಗೆ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಇನ್ನು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಕೂಡಾ ಹಬ್ಬದ ಶುಭಾಶಯ ಕೋರಿದ್ದು, ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ನಾಡ ಹಬ್ಬ ವಿಜಯದಶಮಿಯಾಗಿದೆ. ನಾಡಿನ ಸಮಸ್ತ ಜನತೆಗೆ ಸನ್ಮಂಗಳನ್ನುಂಟು ಮಾಡಲಿ. ಸಮಸ್ತ ಜನತೆಯ ಕಲ್ಯಾಣ ಹಾಗೂ ರಾಜ್ಯದ ಮತ್ತಷ್ಟು ಅಭಿವೃದ್ಧಿಗೆ ತಾಯಿ ಚಾಮುಂಡೇಶ್ವರಿ ಆಶಿರ್ವಾದವನ್ನು ದಯಪಾಲಿಸಲಿ ಎಂದು ಟ್ವೀಟ್ ಮಾಡಿದ್ದಾರೆ.