ಬೆಂಗಳೂರು: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ (Australian Prime Minister Scott Morrison) ಅವರು ನಗರದಲ್ಲಿ ರಾಯಭಾರ ಕಚೇರಿ (Australian Embassy) ಪ್ರಾರಂಭ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಈ ನಿರ್ಣಯವನ್ನು ಸಚಿವ ಅಶ್ವತ್ಥ್ ನಾರಾಯಣ್ (Minister Ashwath Narayan) ಸ್ವಾಗತಿಸಿದ್ದಾರೆ.
ಬೆಂಗಳೂರು ಟೆಕ್ ಶೃಂಗ ಸಭೆ 2021 ರ ಕುರಿತು ಮಾತನಾಡಿದ ಅವರು, ' ಹೂಡಿಕೆ, ವ್ಯಾಪಾರ, ತಂತ್ರಜ್ಞಾನ ಬೆಳವಣಿಗೆಗೆ ಮೊದಲಾದ ಕ್ಷೇತ್ರದಲ್ಲಿ ಅವಶ್ಯಕತೆ ಇರುವ ನಿರ್ಣಯವನ್ನು ಆಸ್ಟ್ರೇಲಿಯಾ ಪ್ರಧಾನಿ ಕೈಗೊಂಡಿರುವುದು ನಿಜಕ್ಕೂ ದೊಡ್ಡ ಬೆಳವಣಿಗೆ. ಇದನ್ನು ರಾಜ್ಯದ ಜನರ ಪರವಾಗಿ ಸ್ವಾಗತಿಸುತ್ತೇನೆ. ಇದರಿಂದ ಭಾರತ-ಆಸ್ಟ್ರೇಲಿಯಾ ದ್ವಿಪಕ್ಷೀಯ ಸಂಬಂಧ ವೃದ್ಧಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.