ಬೆಂಗಳೂರು: ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಮೇಲೆ ಹಲ್ಲೆಗೆ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿ ಬಂದಿದ್ದ ಮೂವರು ಯುವಕರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ತಡರಾತ್ರಿ ಜೆ ಜೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೈ ಮುಖಂಡನ ಮೇಲೆ ದಾಳಿ ಯತ್ನ: ಮೂವರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು - ಜೆ ಜೆ ನಗರ ಠಾಣಾ ವ್ಯಾಪ್ತಿ
ಕಾಂಗ್ರೆಸ್ ಮುಖಂಡರೊಬ್ಬರ ಮೇಲೆ ಹಲ್ಲೆ ನಡೆಸಲು ಆಟೋದಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಮೂವರು ಯುವಕರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಒಬ್ಬ ಪರಾರಿಯಾಗಿದ್ದಾನೆ.
ರಾತ್ರಿ 10 ಗಂಟೆಯ ಸುಮಾರಿಗೆ ಜೆ ಜೆ ನಗರ ಠಾಣಾ ವ್ಯಾಪ್ತಿಯಲ್ಲಿರುವ ಅಲ್ತಾಫ್ ಖಾನ್ ಮನೆ ಬಳಿ ಚಾಕು, ಬ್ಲೇಡ್ಗಳೊಂದಿಗೆ ಆಟೋದಲ್ಲಿ ಬಂದಿದ್ದ ನಾಲ್ವರು, ಹೊಂಚು ಹಾಕಿ ಕುಳಿತಿದ್ದರು. ಬಳಿಕ 'ಅಲ್ತಾಫ್ ಮನೆಯಿಂದ ಹೊರ ಬರ್ಲಿಲ್ಲ, ಬಚಾವ್ ಆದ' ಎಂದು ಮಾತನಾಡಿಕೊಳ್ಳುತ್ತಿದ್ದರು. ಆ ಮಾತು ಕೇಳಿಸಿಕೊಂಡು ಪರಾರಿಯಾಗುತ್ತಿದ್ದ ಆಟೋ ಬೆನ್ನಟ್ಟಿದ ಸ್ಥಳೀಯರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು : ಅಸ್ಸೋಂ ಕೂಲಿ ಕಾರ್ಮಿಕರಿಂದ ತೋಟದ ಮಾಲೀಕನ ಮೇಲೆ ಹಲ್ಲೆಗೆ ಯತ್ನ ಆರೋಪ