ಕರ್ನಾಟಕ

karnataka

ETV Bharat / state

ಮದುವೆ ಮಂಟಪದಲ್ಲಿ ಮಹಿಳೆಯರಿಗೆ ಕಿರುಕುಳ, ಬುದ್ಧಿ ಹೇಳಿದ್ದಕ್ಕೆ ಚಾಕು ಇರಿತ! - etv bharat

ಮಹಿಳೆಯರನ್ನು ರೇಗಿಸುತ್ತಿದ್ದ ದುಷ್ಕರ್ಮಿಗಳನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿಯಲಾಗಿದೆ. ಘಟನೆ ಇಲ್ಲಿನ ಆರ್ ಆರ್ ನಗರದಲ್ಲಿ ನಡೆದಿದ್ದು ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Jun 5, 2019, 7:00 PM IST

Updated : Jun 5, 2019, 7:07 PM IST

ಬೆಂಗಳೂರು:ಮದುವೆ ಮಂಟಪದಲ್ಲಿ ಮಹಿಳೆಯರನ್ನು ರೇಗಿಸುತ್ತಿದ್ದ ದುಷ್ಕರ್ಮಿಗಳನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದ ಘಟನೆ ಇಲ್ಲಿನ ಆರ್.ಆರ್ ನಗರದಲ್ಲಿ ನಡೆದಿದೆ.ಪವನ್​ ಸುಬ್ಬಯ್ಯ ಇರಿತಕ್ಕೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ.

ಕಳೆದ ರಾತ್ರಿ ಪವನ್ ಸುಬ್ಬಯ್ಯ ತನ್ನ ಗೆಳೆಯನ ಮದುವೆಗೆಂದು ಇಲ್ಲಿನ ಅಕ್ಕಮಹಾದೇವಿ ಕಲ್ಯಾಣ ಮಂಟಪಕ್ಕೆ ಬಂದಿದ್ದರು. ಈ ವೇಳೆ ಐದು ಜನರಿದ್ದ ಗ್ಯಾಂಗ್‌ ಧೂಮಪಾನ ಮಾಡುತ್ತಾ ಮದುವೆ ಮನೆಗೆ ಬಂದ ಮಹಿಳೆಯರನ್ನು ರೇಗಿಸುತ್ತಿತ್ತು. ಇದನ್ನು ಗಮನಿಸಿದ ಪವನ್ ಹಾಗೂ ಈತನ ಸ್ನೇಹಿತರು ಬುದ್ಧಿ ಹೇಳಲು ಹೋಗಿದ್ದರು.

ಆದರೆ, ಇವರ ಮಾತು ಕೇಳದ ದುಷ್ಕರ್ಮಿಗಳು​ ಜಗಳ ತೆಗೆದಿದ್ದಲ್ಲದೇ ಪವನ್ ಸುಬ್ಬಯ್ಯಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ನೋವಿನಿಂದ ಬಳಲುತ್ತಿದ್ದ ಪವನ್‌ನನ್ನು ಸ್ನೇಹಿತರು ತಕ್ಷಣ ಸ್ಥಳೀಯ ಕೆಂಗೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

Last Updated : Jun 5, 2019, 7:07 PM IST

ABOUT THE AUTHOR

...view details