ಬೆಂಗಳೂರು: ಕೊಡಿಗೇಹಳ್ಳಿ ಗಣೇಶ ದೇವಸ್ಥಾನ ಸರ್ಕಲ್ ಬಳಿ ಕ್ಯಾಂಪ್ ಮಾಡಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.
'ಮಾಸ್ಕ್ ಏಕೆ ಧರಿಸಿಲ್ಲ' ಎಂದು ಕೇಳಿದ್ದೇ ತಪ್ಪಾಯ್ತು: ಬೆಂಗಳೂರಲ್ಲಿ ವೈದ್ಯರ ನಿಂದಿಸಿ ಹಲ್ಲೆ
ಇಬ್ಬರು ರೋಗಿಗಳು ಮಾಸ್ಕ್ ಧರಿಸದೆ ಕ್ಯಾಂಪ್‌ಗೆ ತಪಾಸಣೆಗೆ ಬಂದಿದ್ದರು. ಈ ವೇಳೆ ಅವರನ್ನು ತಡೆದ ಸಿಬ್ಬಂದಿ ಮಾಸ್ಕ್ ಏಕೆ ಧರಿಸಿಲ್ಲ? ಎಂದು ಕೇಳಿದ್ದಾರೆ. ಹೀಗೆ ಪ್ರಶ್ನಿಸಿದ್ದಕ್ಕೆ ಅವರು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ತನಗೆ ಏಕವಚನದಲ್ಲಿ ನಿಂದಿಸಿದ್ದಲ್ಲದೆ, ಹಲ್ಲೆ ಕೂಡಾ ನಡೆಸಿದ್ದಾರೆ ಎಂದು ವೈದ್ಯ ವೆಂಕಟೇಶ್ ತಿಳಿಸಿದ್ದಾರೆ.
ಇಬ್ಬರು ರೋಗಿಗಳು ಮಾಸ್ಕ್ ಧರಿಸದೆ ತಪಾಸಣೆಗೆ ಬಂದಿದ್ದರು. ಈ ವೇಳೆ ಅವರನ್ನು ತಡೆದ ಸಿಬ್ಬಂದಿ ಮಾಸ್ಕ್ ಏಕೆ ಧರಿಸಿಲ್ಲ? ಎಂದು ಕೇಳಿದ್ದಾರೆ. ಹೀಗೆ ಪ್ರಶ್ನಿಸಿದ್ದಕ್ಕೆ ಅವರು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ತನಗೆ ಏಕವಚನದಲ್ಲಿ ನಿಂದಿಸಿದ್ದಲ್ಲದೆ, ಹಲ್ಲೆ ಕೂಡಾ ನಡೆಸಿದ್ದಾರೆ ಎಂದು ವೈದ್ಯ ವೆಂಕಟೇಶ್ ತಿಳಿಸಿದ್ದಾರೆ.
ಈ ಕೃತ್ಯದಲ್ಲಿ ಭಾಗಿಯಾದವರನ್ನು ಕೇಶವ್, ಜಯರಾಮ್ ಹಾಗು ನಾರಾಯಣ ಎಂದು ಗುರುತಿಸಲಾಗಿದೆ. ಇದರಿಂದ ನೊಂದ ವೈದ್ಯ ಸದ್ಯ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಬಳಿಕ ತನ್ನ ನೋವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ.