ಬೆಂಗಳೂರು: ನೀವು ಬಿತ್ತಿರುವ ಫಲವನ್ನೇ ನೀವು ಉಣ್ಣಬೇಕು ಎಂದು ಟ್ವೀಟ್ ಮಾಡುವ ಮೂಲಕ ಡಿಸಿಎಂ ಅಶ್ವಥ್ ನಾರಾಯಣ್ ಅವರು ಮಾಜಿ ಸಚಿವ ಡಿ.ಕೆ. ಶಿವಕುಮಾರ್ಗೆ ಮತ್ತೆ ಟಾಂಗ್ ನೀಡಿದ್ದಾರೆ.
ನೀವು ಬಿತ್ತಿರುವ ಫಲವನ್ನು ನೀವೇ ಉಣ್ಣಬೇಕು: ಡಿಕೆಶಿಗೆ ಡಿಸಿಎಂ ಅಶ್ವಥ್ ನಾರಾಯಣ್ ಟಾಂಗ್ - ಡಿಕೆಶಿಗೆ ಡಿಸಿಎಂ ಅಶ್ವತ್ಥನಾರಾಯಣ್ ಟಾಂಗ್
ನೀವು ಬಿತ್ತಿರುವ ಫಲವನ್ನು ನೀವೇ ಉಣ್ಣಬೇಕು ಎಂದು ಟ್ವೀಟ್ ಮಾಡುವ ಮೂಲಕ ಡಿಸಿಎಂ ಅಶ್ವಥ್ ನಾರಾಯಣ ಅವರು ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ಮತ್ತೆ ಟಾಂಗ್ ನೀಡಿದ್ದಾರೆ.
ಡಿಕೆಶಿಗೆ ಡಿಸಿಎಂ ಅಶ್ವತ್ಥನಾರಾಯಣ್ ಟಾಂಗ್
ದ್ವೇಷದ ರಾಜಕಾರಣದ ಆರೋಪ ಮತ್ತು ನಿಮ್ಮ ಕುಕೃತ್ಯಗಳಿಗೆ ಅನುಕಂಪ ಗಿಟ್ಟಿಸುವ ನಿಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ನೀವು ಬಿತ್ತಿರುವ ಫಲವನ್ನು ನೀವೇ ಉಣ್ಣಬೇಕು. ಭಾರತ ಬದಲಾಗುತ್ತಿದೆ. ನವಭಾರತ ನಿರ್ಮಾಣವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತವು ಪರಿವರ್ತನೆಯ ಹಾದಿಯಲ್ಲಿದೆ. 'ಹೊಸ ಭಾರತ'ದಲ್ಲಿ ಭ್ರಷ್ಟಾಚಾರ ಮತ್ತು ಜನರ ಹಣವನ್ನು ಲೂಟಿ ಮಾಡಲು ಅವಕಾಶವಿಲ್ಲ. ಭ್ರಷ್ಟ ಮತ್ತು ಅಪ್ರಾಮಾಣಿಕರನ್ನು ನ್ಯಾಯಾಲಯದ ಮುಂದೆ ತರಲು ಸರ್ಕಾರ ಹೋರಾಡುತ್ತಿದೆ ಎಂದು ಟ್ವಿಟ್ಟರ್ ಮೂಲಕ ಡಿಸಿಎಂ ಚಾಟಿ ಬೀಸಿದ್ದಾರೆ.