ಬೆಂಗಳೂರು:ಕಂಪನಿಯ ದತ್ತಾಂಶ ಕದ್ದು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಆರೋಪದಡಿ ಓರ್ವನನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಪ್ರತಿಷ್ಠಿತ ಕಂಪನಿ ದತ್ತಾಂಶ ಕದಿಯುತ್ತಿದ್ದ ಡೇಟಾ ಕಳ್ಳನ ಬಂಧನ
ಕಂಪನಿಯ ದತ್ತಾಂಶ ಕದ್ದು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಆರೋಪದಡಿ ಓರ್ವನನ್ನು ಬೆಂಗಳೂರು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕಗ್ಗಲಿಪುರದ ಕಾಮಿನ್ ಪ್ರಜಾಪತಿ ಬಂಧಿತ ಆರೋಪಿ. ಈತ 2017ರಿಂದ 2019ರವರೆಗೆ ಖಾಸಗಿ ಕಂಪನಿಯೊಂದರಲ್ಲಿ ಹಿರಿಯ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಕಂಪನಿಯ ದತ್ತಾಂಶ ಕದ್ದು, ಗ್ರಾಹಕರ ಮಾಹಿತಿಯಾದ ಬ್ಯಾಂಕ್ ವಿವರ, ಕ್ರೆಡಿಟ್ ಕಾರ್ಡ್, ಪೇ ರೋಲ್, ಕಟ್ಟಡ ಮಾಹಿತಿ ಸೇರಿದಂತೆ ಇತರೆ ಮಾಹಿತಿ ಪಡೆದುಕೊಳ್ಳುತ್ತಿದ್ದ. ಬಳಿಕ ಅವನ್ನು ತನ್ನ ವೈಯಕ್ತಿಕ ಮೇಲ್‌ಗೆ ಹಾಕಿಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ 1 ಲ್ಯಾಪ್‌ಟ್ಯಾಪ್, ಸಿಪಿಯು, ಮೊಬೈಲ್ ಸೇರಿದಂತೆ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.