ಬೆಂಗಳೂರು: ದೇಶಾದ್ಯಂತ ಆರ್ಭಟಿಸುತ್ತಿರುವ ಕೊರೊನಾ ಸೋಂಕು ತಡೆಗೆ ಸರ್ಕಾರದ ಮತ್ತೊಂದು ಹೆಜ್ಜೆ ಇರಿಸಿದೆ. ಅದೇ ಆರೋಗ್ಯ ಸೇತು ಆ್ಯಪ್ ಬಳಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈ ಆರೋಗ್ಯ ಸೇತು ಆ್ಯಪ್ಅನ್ನು ಸಾರ್ವಜನಿಕರು, ಸರ್ಕಾರಿ ನೌಕರರು, ಸ್ವಯಂ ಸೇವಕರು ಕಡ್ಡಾಯವಾಗಿ ಬಳಸುವಂತೆ ತಿಳಿಸಿದೆ.
ಕೊರೊನಾ ಸೋಂಕಿತರು ಹತ್ತಿರ ಬಂದ್ರೆ ಅಲರ್ಟ್ ಮಾಡುತ್ತೆ ಈ ಆ್ಯಪ್! - ಆರೋಗ್ಯ ಸೇತು ಆ್ಯಪ್
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅವರು ಸಾರ್ವಜನಿಕವಾಗಿ ಜನಗಳ ಹತ್ತಿರ ಸುಳಿಯುತ್ತಿದ್ದಂತೆ ಅಲರ್ಟ್ ಮಾಡುವ ಆ್ಯಪ್ವೊಂದನ್ನು ರಾಜ್ಯ ಸರ್ಕಾರ ಬಿಡಿಗಡೆ ಮಾಡಿದೆ. ಸೋಂಕಿತರು ಹತ್ತಿರ ಬರುತ್ತಿದ್ದಂತೆ ನಿಮ್ಮ ಮೊಬೈಲ್ನಿಂದ ನಿಮಗೆ ಎಚ್ಚರಿಕೆ ರವಾನೆಯಾಗುತ್ತದೆ. ಇನ್ಸ್ಟಾಲ್ ದಿ ಆ್ಯಪ್, ಸೇವ್ ದಿ ಲೈಫ್.
ಆರೋಗ್ಯ ಸೇತು ಕೋವಿಡ್-19 ಆ್ಯಪ್ಅನ್ನು ಐಒಎಸ್ ಹಾಗೂ ಆಂಡ್ರಾಯ್ಡ್ ಮೊಬೈಲ್ಗಳಲ್ಲಿ ಬಳಸಬಹುದು. ಇದರಲ್ಲಿ ಮುಖ್ಯವಾಗಿ ಕೊರೊನಾ ಪಾಸಿಟಿವ್ ಇರುವ ವ್ಯಕ್ತಿ ಹತ್ತಿರ ಸುಳಿಯುತ್ತಿದಂತೆ ನಿಮ್ಮನ್ನು ಅಲರ್ಟ್ ಮಾಡುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಇದಕ್ಕಾಗಿ ಬ್ಲೂಟೂತ್ ಮತ್ತು ಇಂಟರ್ನೆಟ್ ಆನ್ ಮೂಡ್ನಲ್ಲಿ ಇರಬೇಕು ಅಷ್ಟೆ. ಆ ಮೂಲಕ ಎಚ್ಚರಿಕೆ ಘಂಟೆ ರವಾಸಿಸುತ್ತದೆ. ಆರೋಗ್ಯ ಸೇತು ಆ್ಯಪ್ ಕೊರೊನಾ ಸೋಂಕು ಪಾಸಿಟಿವ್ ಆಗಿರುವ, ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಮೇಲೆ ನಿಗಾ ಇಟ್ಟಿರುವ ಮಾಹಿತಿ ಕೂಡ ಒದಗಿಸುತ್ತದೆ. ಹೀಗಾಗಿ ಎಲ್ಲರೂ ಬಳಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.