ಬೆಂಗಳೂರು :ಲಾಕ್ಡೌನ್ ವೇಳೆ ರಾಜಧಾನಿ ಪೊಲೀಸರ ಕಾರ್ಯವೈಖರಿಗೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ಬಾಲಕ ಬಿಗ್ ಸೆಲ್ಯೂಟ್ ಮಾಡಿದ್ದಾನೆ.
ಬೆಂಗಳೂರು ಪೊಲೀಸರ ಕಾರ್ಯವೈಖರಿಗೆ ಆಸೀಸ್‌ನಲ್ಲಿ ಕನ್ನಡದ ಚಿಣ್ಣ ಸೆಲ್ಯೂಟ್!! - ಲಾಕ್ಡೌನ್ ಎಫೆಕ್ಟ್
ನಮ್ಮ ಬೆಂಗಳೂರಿನ ಜನರ ರಕ್ಷಣೆಗೆ ಹಗಲು-ಇರುಳು ಶ್ರಮಿಸುತ್ತಿರುವ ಭಾಸ್ಕರ್ ರಾವ್ ಅಂಕಲ್‌ಗೆ ಹಾಗೂ ನಿಮ್ಮ ಎಲ್ಲಾ ಪೊಲೀಸರಿಗೆ ಮೆಲ್ಬೋರ್ನ್‌ನಿಂದ ಅಥರ್ವನ್ ಮಾಡುವ ಬಿಗ್ ಸೆಲ್ಯೂಟ್ ಎಂದು ಕನ್ನಡದಲ್ಲೇ ಬೋರ್ಡ್ ಬರೆಯುವ ಮೂಲಕ ಪೊಲೀಸರ ಮನೋಬಲ ಹೆಚ್ಚಿಸಲು ಕಾರಣನಾಗಿದ್ದಾನೆ.
ಕೊರೊನಾ ನಿಯಂತ್ರಣಕ್ಕಾಗಿ ನಗರ ಪೊಲೀಸರು ಕೈಕೊಂಡಿರುವ ಕ್ರಮಗಳ ಬಗ್ಗೆ ಪುಟ್ಟ ಬಾಲಕನೊಬ್ಬ ಮೆಚ್ಚುಗೆ ವ್ಯಕ್ತಪಡಿಸಿ ಗೌರವ ಸೂಚಿಸಿದ್ದಾನೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಭಾಸ್ಕರ್ ಅಂಕಲ್ ಎಂದಿರುವ ಅಥರ್ವನ್ ಎಂಬ ಬಾಲಕ,ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿಯೇ ನಿಂತು ಸೆಲ್ಯೂಟ್ ಮಾಡಿ ಬೆಂಗಳೂರು ಪೊಲೀಸರಿಗೆ ಗೌರವ ಸೂಚಿಸಿದ್ದಾನೆ.
ನಮ್ಮ ಬೆಂಗಳೂರಿನ ಜನರ ರಕ್ಷಣೆಗೆ ಹಗಲು-ಇರುಳು ಶ್ರಮಿಸುತ್ತಿರುವ ಭಾಸ್ಕರ್ ರಾವ್ ಅಂಕಲ್‌ಗೆ ಹಾಗೂ ನಿಮ್ಮ ಎಲ್ಲಾ ಪೊಲೀಸರಿಗೆ ಮೆಲ್ಬರ್ನ್‌ನಿಂದ ಅಥರ್ವನ್ ಮಾಡುವ ಬಿಗ್ ಸೆಲ್ಯೂಟ್ ಎಂದು ಕನ್ನಡದಲ್ಲೇ ಬೋರ್ಡ್ ಬರೆಯುವ ಮೂಲಕ ಪೊಲೀಸರ ಮನೋಬಲ ಹೆಚ್ಚಿಸಲು ಕಾರಣನಾಗಿದ್ದಾನೆ. ಇದಕ್ಕೆ ಟ್ವೀಟ್‌ನಲ್ಲೇ ಪ್ರತಿಕ್ರಿಯಿಸಿರುವ ನಗರ ಪೊಲೀಸರು, ನಿಮ್ಮ ಸ್ಫೂರ್ತಿಯುತ ಮಾತಿಗೆ ನಮ್ಮ ಕಡೆಯಿಂದ ಧನ್ಯವಾದಗಳು ಎಂದಿದ್ದಾರೆ.