ಕರ್ನಾಟಕ

karnataka

ETV Bharat / state

ಸಂಕಷ್ಟದಲ್ಲಿರುವ ಪ್ರವಾಸಿ ವಾಹನ ಮಾಲೀಕರ ಬೆಂಬಲಕ್ಕೆ ಬರುವಂತೆ ಸಿದ್ದರಾಮಯ್ಯಗೆ ಮನವಿ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಭೇಟಿ‌ ಮಾಡಿದ ಸಂಘ

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ, ತಾವು ಸಾರಿಗೆ ಸಚಿವರನ್ನು ಭೇಟಿಯಾಗಿ ವಿಚಾರವಾಗಿ ಸಮಾಲೋಚಿಸುತ್ತೇನೆ. ಅವಕಾಶ ಸಿಕ್ಕಿರೆ ಸರ್ಕಾರದ ಗಮನ ಸೆಳೆಯಲು ಸೂಕ್ತ ವೇದಿಕೆಯಲ್ಲಿ ಮಾತನಾಡುತ್ತೇನೆ..

Siddaramayya
Siddaramayya

By

Published : Jul 24, 2020, 3:10 PM IST

ಬೆಂಗಳೂರು :ಸಂಕಷ್ಟದಲ್ಲಿರುವ ಪ್ರವಾಸಿ ವಾಹನಗಳಿಗೆ ತೆರಿಗೆ ಮನ್ನಾ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘವು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದೆ.

ಸಂಘದ ಅಧ್ಯಕ್ಷ ಭೈರವ ಸಿದ್ದರಾಮಯ್ಯನವರು, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಕೊರೊನಾ ರೋಗದಿಂದ ಇಡೀ ಅರ್ಥ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದೆ. ಇದು ವಾಹನ ಚಾಲಕರ ಹಾಗೂ ಮಾಲೀಕರ ಬದುಕನ್ನೂ ಹದಗೆಡಿಸಿದೆ. ಈ ಹಿನ್ನೆಲೆ ನಮ್ಮ ಸಮಸ್ಯೆ ಬಗೆಹರಿಸುವಂತೆ ಸಾರಿಗೆ ಸಚಿವರ ಜೊತೆ ಸಮಾಲೋಚನೆ ನಡೆಸಿ, ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.

ಮ್ಯಾಕ್ಸಿಕ್ಯಾಬ್ ಓಡಿಲ್ಲ :ಮಾಕ್ಸಿ ಕ್ಯಾಬ್ ಫೆಬ್ರವರಿ ತಿಂಗಳಿನಿಂದ ಈವರೆಗೂ ಓಡಿಲ್ಲ. ಈ ಮಧ್ಯೆ ಮ್ಯಾಕ್ಸಿಕ್ಯಾಬ್ ವಾಹನಕ್ಕೆ ಸರ್ಕಾರ ಹೊಸ ಆದೇಶದಲ್ಲಿ 900 ರೂ. ತೆರಿಗೆಯನ್ನು ವಿಧಿಸಿತ್ತು. ಇದು ಗೆಜೆಟ್‌ನಲ್ಲಿ ಅನುಮೋದನೆ ಕೂಡ ಆಗಿತ್ತು. ಮುಖ್ಯಮಂತ್ರಿಗಳಿಗೆ ಉತ್ತರಕರ್ನಾಟಕ ಮತ್ತು ದಕ್ಷಿಣಕರ್ನಾಟಕ ಮತ್ತು ಹಳೇ ಮೈಸೂರು ಭಾಗದ ಜನಪ್ರತಿನಿಧಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟು ಒತ್ತಾಯಿಸಿದಾಗ ಮ್ಯಾಕ್ಸಿಕ್ಯಾಬ್ ವಾಹನದ ಪ್ರತಿ ಆಸನಕ್ಕೆ ₹700 ತೆರಿಗೆ ಇಳಿಕೆ ಮಾಡಿ ಮರು ಆದೇಶ ಹೊರಡಿಸಿ, ಹಣಕಾಸು ಇಲಾಖೆ ಕಾರ್ಯದರ್ಶಿಗೆ ಈ ಸೂಚನೆ ನೀಡಲಾಗಿದೆ. ಅವರು ಇನ್ನೂ ಕಾರ್ಯಕತಗೊಳಿಸಿಲ್ಲ.

ನಾವು ಈಗಾಗಲೇ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಮಾಹಿತಿ ತಲುಪಿಸಿದ್ದು, ಪ್ರತಿಪಕ್ಷದ ನಾಯಕರಾಗಿ ತಾವು ಕೂಡ ಒತ್ತಡ ಹೇರುವಂತೆ ಸಂಘದ ಪರ ಭೈರವ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ, ತಾವು ಸಾರಿಗೆ ಸಚಿವರನ್ನು ಭೇಟಿಯಾಗಿ ವಿಚಾರವಾಗಿ ಸಮಾಲೋಚಿಸುತ್ತೇನೆ. ಅವಕಾಶ ಸಿಕ್ಕಿರೆ ಸರ್ಕಾರದ ಗಮನ ಸೆಳೆಯಲು ಸೂಕ್ತ ವೇದಿಕೆಯಲ್ಲಿ ಮಾತನಾಡುತ್ತೇನೆ. ವಾಹನ ಮಾಲೀಕರು ಹಾಗೂ ಚಾಲಕರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಸದಾ ಕಾಳಜಿ ವಹಿಸುತ್ತಲೇ ಬಂದಿದ್ದು, ಈ ಸಾರಿಯೂ ಅದು ಪುನರಾವರ್ತನೆಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

ಈಗಾಗಲೇ ಹಿಮಾಚಲಪ್ರದೇಶ ರಾಜ್ಯ ಸರ್ಕಾರವು ಏಪ್ರಿಲ್ 2020ರಿಂದ ಜುಲೈ 2020ರವರೆಗೆ ರಸ್ತೆ ತೆರಿಗೆ ಮತ್ತು ದಂಡ ಪಾವತಿಯಿಂದ ವಿನಾಯಿತಿ ನೀಡಿದೆ. ಅದೇ ರೀತಿ ರಾಜ್ಯದಲ್ಲಿನ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ಕೋರಲಾಗಿದೆ. ಇದೇ ರೀತಿ ಹಲವು ಬೇಡಿಕೆಗಳನ್ನು ನಾವು ಸರ್ಕಾರದ ಮುಂದಿಟ್ಟಿದ್ದು, ಅದರ ಪ್ರತಿಯನ್ನು ವಿಧಾನಸಭೆ ಪ್ರತಿಪಕ್ಷದ ನಾಯಕರಿಗೂ ನೀಡಿದ್ದೇವೆ. ಅದಕ್ಕೆ ಅವರಿಂದ ಪೂರಕ ಸ್ಪಂದನೆ ದೊರಕಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details