ಕರ್ನಾಟಕ

karnataka

ETV Bharat / state

ಜಿಮ್ ಮಾಲೀಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಮನವಿ!

ರಾಜ್ಯ ಸರ್ಕಾರ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಜಿಮ್ ಮಾಲೀಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಜಿಮ್​​​ ಮಾಲೀಕರು ಮನವಿ ಮಾಡಿದ್ದಾರೆ.

appeal-to-government-to-announce-special-package-for-gym-owners
ಜೀಮ್ ಮಾಲೀಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಮನವಿ!

By

Published : May 19, 2021, 11:13 PM IST

ಬೆಂಗಳೂರು: ಎರಡನೇ ಬಾರಿ ಲಾಕ್‌ಡೌನ್‌ನಿಂದ ಮತ್ತೊಮ್ಮೆ ಜಿಮ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಜೀಮ್ ಮಾಲೀಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಜಿಮ್ ಮಾಲೀಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಮನವಿ!

ಈ ಬಗ್ಗೆ ಜಿಮ್​ ಮಾಲೀಕ ಪ್ರಸಾದ್ ಮಾತನಾಡಿ, ಕೋವಿಡ್ ಎರಡನೇ ಅಲೆಯಿಂದಾಗಿ ಜೀಮ್​ಗಳನ್ನ ಕ್ಲೋಸ್ ಮಾಡಿಸಲಾಗಿದೆ. ಜಿಮ್ ಕ್ಲೋಸ್ ಆಗಿರೋದ್ರಿಂದ ಜಿಮ್ ನಂಬಿಕೊಂಡಿದ್ದ ಮಾಲೀಕರು ಜೀವನ ಸಾಗಿಸೋದು ಕಷ್ಟವಾಗಿದೆ. 10 ಸಾವಿರ ಹತ್ತು ರೂಪಾಯಿ ಕೂಡ ಆದಾಯ ಬರುತ್ತಿಲ್ಲ. ಇದರಿಂದಾಗಿ ಮನೆ ಬಾಡಿಗೆ, ಪವರ್ ಬಿಲ್, ವಾಟರ್ ಬಿಲ್ ಕಟ್ಟೋಕೆ ಸಾಕಷ್ಟು ಕಷ್ಟವಾಗುತ್ತಿದೆ. ಸರ್ಕಾರ ಜಿಮ್ ಮಾಲೀಕರಿಗೆ ಒಂದು ಪ್ಯಾಕೇಜ್ ಘೋಷಿಸಬೇಕು.

ಕೊನೆಪಕ್ಷ ಜಿಮ್​ಗಳ ಬಾಡಿಗೆಯನ್ನಾದ್ರೂ ಕಟ್ಟದೇ ಇರುವ ರೀತಿ ಮಾಡಬೇಕು. ಈಗಾಗಲೇ 350 ರಿಂದ 400 ಜಿಮ್​ಗಳು ಮೊದಲನೆ ಕೊರೊನಾ ಅಲೆಯಲ್ಲಿಯೇ ಮುಚ್ಚಿವೆ. ಈ ವರ್ಷ ಮತ್ತೆ 150 ಜಿಮ್ ಕ್ಲೋಸ್ ಆಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಒಂದು ಕ್ರಮ ತೆಗೆದುಕೊಳ್ಳಬೇಕು. ಜಿಮ್​ನಿಂದ ಯಾರಿಗೂ ತೊಂದರೆಯಾಗಿಲ್ಲ. ಕೊರೊನಾ ಕೂಡ ಯಾರಿಗೂ ಬಂದಿಲ್ಲ. ಫಿಟ್​ನೆಸ್ ತುಂಬಾ ಮುಖ್ಯ,ಆದ್ದರಿಂದ ಜಿಮ್​ಗಳನ್ನ ಸರ್ಕಾರ ಉಳಿಸುವ ಪ್ರಯತ್ನ ಮಾಡಬೇಕು ಎಂದು ಜಿಮ್ ಮಾಲೀಕರು ಮನವಿ ಮಾಡಿದ್ದಾರೆ.

ABOUT THE AUTHOR

...view details