ಕರ್ನಾಟಕ

karnataka

ETV Bharat / state

ದೇಶ ವಿರೋಧಿ ಘೋಷಣೆ ಪ್ರಕರಣ: ಅಮೂಲ್ಯ- ಆರ್ದ್ರಾಳ ರೋಚಕ ಕಹಾನಿ ಬಟಾಬಯಲು

ದೇಶ ವಿರೋಧಿ ಘೋಷಣೆ ಕೂಗಿದ ಅಮೂಲ್ಯ ವಿಚಾರಣೆಯನ್ನು ತನಿಖಾ ತಂಡ ಚುರುಕುಗೊಳಿಸಿದೆ. ಅಮೂಲ್ಯ ಸ್ನೇಹಿತರ ವಿಚಾರಣೆ ವೇಳೆ ಹಲವಾರು ವಿಷಯ ಬಯಲಾಗಿದೆ.

Anti-Country slogan
ಅಮೂಲ್ಯ- ಆರ್ದ್ರಾಳ ರೋಚಕ ಕಹಾನಿ ಬಟಾಬಯಲು

By

Published : Feb 26, 2020, 3:44 PM IST

ಬೆಂಗಳೂರು: ಸಿಎಎ ಪ್ರತಿಭಟನೆ ವೇಳೆ, ದೇಶ ವಿರೋಧಿ ಘೋಷಣೆ ಕೂಗಿದ ಅಮೂಲ್ಯ ವಿಚಾರಣೆಯನ್ನು ತನಿಖಾ ತಂಡ ಚುರುಕುಗೊಳಿಸಿದೆ. ಅಮೂಲ್ಯ ಸ್ನೇಹಿತರ ವಿಚಾರಣೆ ವೇಳೆ ಹಲವಾರು ವಿಷಯ ಬಯಲಾಗಿದೆ.

ಸದ್ಯ ಪೊಲೀಸರ ವಶದಲ್ಲಿರುವ ಅಮೂಲ್ಯ ಲಿಯೋನ್ ಹಾಗೂ ಟೌನ್ ಹಾಲ್ ಬಳಿ ಬಂಧಿತರಾದ ಆರ್ದ್ರಾ ಇಬ್ಬರೂ ಸ್ನೇಹಿತರಾಗಿದ್ದಾರೆ. ಒಂದೇ ಪಿಜಿಯಲ್ಲಿ ಇಬ್ಬರು ವಾಸವಿದ್ದರು. ಅಮೂಲ್ಯಾಗೆ ಪ್ರಚೋದನಕಾರಿ ಭಾಷಣ ಮಾಡಿ ಫೇಮಸ್ ಆಗುವ ಖಯಾಲಿ ಇತ್ತಂತೆ. ಆದ್ರೆ ಅಮೂಲ್ಯ ಏನು ಮಾಡುತ್ತಾಳೋ ಅದಕ್ಕೆ ಆರ್ದ್ರಾ ಸಾಥ್ ನೀಡ್ತಿದ್ದಳಂತೆ. ಅಂದು ಫ್ರೀಡಂ ಪಾರ್ಕ್​ನ ಪ್ರತಿಭಟನೆ ವೇಳೆ ಆರ್ದ್ರಾ ಕೂಡ ಬಂದಿದ್ದಳು.

ಯಾವಾಗ ಅಮೂಲ್ಯಾಳನ್ನ ಜೈಲಿಗಟ್ಟಲಾಯ್ತು, ಈ ವೇಳೆ ತಾನು ಜೈಲಿಗೆ ಹೋಗಲು ನಿರ್ಧರಿಸಿದ್ದಳು ಆರ್ದ್ರಾ. ಹೀಗಾಗಿ ಟೌನ್ ಹಾಲ್ ಬಳಿ ನಡೆದಿದ್ದ ಪ್ರತಿಭಟನೆ ವೇಳೆ ಬೇಕಂತಲೇ ಬಂದು ಫ್ರೀ ಕಾಶ್ಮೀರ ಎಂದು ಪೊಲೀಸರಿಗೆ ತಿಳಿಯುವಂತೆ ಬೋರ್ಡ್ ಇಟ್ಟಿದ್ದಳು ಆರ್ದ್ರಾ. ಈ ವೇಳೆ, ಪೊಲೀಸರು ಆಕೆಯನ್ನ ಬಂಧಿಸಿ ಜೈಲಿಗಟ್ಟಿದ್ದು, ಈ ಮೂಲಕ ಅಮೂಲ್ಯ ಹಾಗೂ ಆರ್ದ್ರಾ ಒಂದೇ ಜೈಲಿಗೆ ಸೇರಿರುವ ವಿಚಾರ ತನಿಖೆಯಲ್ಲಿ ಬಟಾಬಯಲಾಗಿದೆ.

ಸದ್ಯ ಪಶ್ಚಿಮ ವಿಭಾಗದ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಅಮೂಲ್ಯ ಪೊಲೀಸರ ವಶದಲ್ಲಿದ್ದಾಳೆ. ಪೊಲೀಸರು ಅಮೂಲ್ಯಳ ಹಿನ್ನೆಲೆ ಆಕೆಯ ಚಲನವಲನದ ಕುರಿತು ಸಂಪೂರ್ಣ ತನಿಖೆ ನಡೆಸ್ತಿದ್ದಾರೆ. ಹಾಗೆ ಆಕೆಗೆ ಮುಂಜಾನೆ ತಿಂಡಿ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿಕೊಟ್ಟು ಬಸವೇಶ್ವರ ನಗರ ಠಾಣಾ ಸುತ್ತಾ ಖಾಕಿ‌ ಕಣ್ಗಾವಲು ಹಾಕಿ ಸಂಪೂರ್ಣ ಭದ್ರತೆ ವಹಿಸಲಾಗಿದೆ.

ABOUT THE AUTHOR

...view details