ಕರ್ನಾಟಕ

karnataka

By

Published : May 8, 2020, 4:28 PM IST

ETV Bharat / state

ಮದ್ಯ ಪ್ರಿಯರಿಗೆ ಮತ್ತೊಂದು ಗುಡ್​ನ್ಯೂಸ್​​!

ನಾಳೆಯಿಂದ ಬಾರ್, ಕ್ಲಬ್, ಲಾಡ್ಜ್ ಗಳಲ್ಲಿ ಪಾರ್ಸೆಲ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಎಂಆರ್​​ಪಿ ಬೆಲೆಗೆ ಮದ್ಯ ಮಾರಾಟ ಮಾಡಬೇಕು ಎಂದು ಅಬಕಾರಿ ಸಚಿವ ಎಚ್​. ನಾಗೇಶ್​​ ಹೇಳಿದ್ದಾರೆ.

ಅಬಕಾರಿ ಸಚಿವ ಎಚ್​​. ನಾಗೇಶ್
ಅಬಕಾರಿ ಸಚಿವ ಎಚ್​​. ನಾಗೇಶ್

ಬೆಂಗಳೂರು: ಮದ್ಯ ಪ್ರಿಯರಿಗೆ ನಾಳೆಯಿಂದ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಶನಿವಾರದಿಂದ ಲಾಡ್ಜ್, ಬಾರ್, ಕ್ಲಬ್​​ಗಳಲ್ಲಿ ಮದ್ಯ ಮಾರಾಟಕ್ಕೆ‌ ಸರ್ಕಾರ ಅನುಮತಿ ನೀಡಿದೆ.

ಈ ಬಗ್ಗೆ ವಿಕಾಸಸೌಧದಲ್ಲಿ ಮಾತನಾಡಿದ ಅಬಕಾರಿ ಸಚಿವ ಎಚ್​​. ನಾಗೇಶ್, ನಾಳೆಯಿಂದ ಬಾರ್, ಕ್ಲಬ್, ಲಾಡ್ಜ್ ಗಳಲ್ಲಿ ಪಾರ್ಸೆಲ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಎಂಆರ್​​ಪಿ ಬೆಲೆಗೆ ಮದ್ಯ ಮಾರಾಟ ಮಾಡಬೇಕು ಎಂದು ಸೂಚಿಸಿದ್ದಾರೆ.

ಎಂಆರ್​​ಪಿ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದ್ರೆ, ಲೈಸನ್ಸ್ ರದ್ದು ಮಾಡಲಾಗುತ್ತದೆ. ಇದರ ಜವಾಬ್ದಾರಿ ಮಾಲೀಕರದ್ದು. ಮಾರಾಟ ಸಮಯ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಇರಲಿದೆ ಎಂದರು.

ಅಬಕಾರಿ ಸಚಿವ ಎಚ್​. ನಾಗೇಶ್

ಈ ವರ್ಷ ಅಂದಾಜು 25 ಸಾವಿರ ರೂ. ಕೋಟಿ ಆದಾಯ ಬರಲಿದೆ. 22,500 ಕೋಟಿ ರೂ. ಆದಾಯಕ್ಕೆ 2,500 ಕೋಟಿ ಹೆಚ್ಚಳ ಆಗಲಿದೆ. ಐದನೇ ದಿನದ ಮಧ್ಯಾಹ್ನದವರೆಗೆ 122.16 ಕೋಟಿ ರೂ. ತೆರಿಗೆ ಸಂಗ್ರಹ ಆಗಿದೆ. ಕಳೆದ ಐದು ದಿನಗಳಿಂದ ಸರ್ಕಾರಕ್ಕೆ ಒಟ್ಟು 767 ಕೋಟಿ ರೂ. ಆದಾಯ ಬಂದಿದೆ. ಏಳು ದಿನಕ್ಕೆ ಸಾವಿರ ಕೋಟಿ ರೂ. ತಲುಪುವ ಸಾಧ್ಯತೆ ಇದೆ ಎಂದರು.

ಇನ್ನು ಗಡಿಭಾಗದಲ್ಲಿ ಆಧಾರ್ ಪರೀಕ್ಷಿಸಿ ಮದ್ಯ ನೀಡಲು ಸೂಚನೆ ನೀಡಿದ್ದೇನೆ. ಲಾಕ್‌ಡೌನ್ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು‌‌. ಈವರೆಗೆ ರಾಜ್ಯಾದ್ಯಂತ 1,200 ಅಕ್ರಮ ಮಾರಾಟದ ಪ್ರಕರಣಗಳು ಪತ್ತೆಯಾಗಿವೆ ಎಂದರು.

ಸುಪ್ರೀಂಕೋರ್ಟ್ ಆನ್​​ಲೈನ್ ಮೂಲಕ‌ ಮದ್ಯ ಮಾರಾಟ ಮಾಡುವ ಸಂಬಂಧ ನೀಡಿದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ಆದೇಶ ನೋಡಿಲ್ಲ. ಆ ತರಹದ ಆದೇಶ ನೀಡಿದರೆ ಸಂತೋಷದ ವಿಷಯ. ಅದನ್ನು ಅನುಷ್ಠಾನಕ್ಕೆ ತರಲು ಯೋಚಿಸಲಾಗುತ್ತದೆ. ಆನ್​​ಲೈನ್ ಮಾರಾಟಕ್ಕೆ ಅವಕಾಶ ನೀಡಿದ್ರೆ ತಪ್ಪಿಲ್ಲ. ಮೊದಲಿಂದಲೂ ಆ ಬಗ್ಗೆ ಚರ್ಚೆ ಇತ್ತು ಎಂದು ತಿಳಿಸಿದರು.

ABOUT THE AUTHOR

...view details