ಕರ್ನಾಟಕ

karnataka

ETV Bharat / state

ಚಿಲುಮೆ ಕೇಸ್: ಮತ್ತೋರ್ವ ಆರೋಪಿ ಬಂಧನ.. ಬಂಧಿತರ‌ ಸಂಖ್ಯೆ 12ಕ್ಕೆ ಏರಿಕೆ - ಚಿಲುಮೆ ಕೇಸ್

ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣ ಸಂಬಂಧ ಪ್ರಮುಖ ಆರೋಪಿ ರವಿಕುಮಾರ್ ಆಪ್ತ ಅನಿಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ
ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ

By

Published : Nov 28, 2022, 3:34 PM IST

ಬೆಂಗಳೂರು:ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಒಟ್ಟು ಇದುವರೆಗೂ‌ ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಕರಣ ಪ್ರಮುಖ ಆರೋಪಿ ರವಿಕುಮಾರ್ ಜೊತೆ ಆಪ್ತ ಹಾಗೂ ಅನಿಲ್ ಎಂಬುವರು ಬಂಧಿತ ಆರೋಪಿ. ಇವರು ಮಹದೇವಪುರದಲ್ಲಿ ಚಿಲುಮೆ ಕಚೇರಿಯ ಉಸ್ತುವಾರಿ ವಹಿಸಿಕೊಂಡಿದ್ದ‌ರು. ಹಲವು ವರ್ಷಗಳಿಂದ ರವಿಕುಮಾರ್ ಜೊತೆ ಗುರುತಿಸಿಕೊಂಡಿದ್ದರು. ನೌಕರರ ನೇಮಕ ಹಾಗೂ‌ ಲಾಜಿಸ್ಟಿಕ್ ವರ್ಕ್ ಸೇರಿದಂತೆ ಎಲ್ಲವೂ ಅನಿಲ್​ ಅಧೀನದಲ್ಲೇ ನಡೆಯುತ್ತಿದ್ದವು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅನಿಲ್ ತಲೆಮರೆಸಿಕೊಂಡಿದ್ದರು ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಬಿಬಿಎಂಪಿ ಅಧಿಕಾರಿಗಳನ್ನು ಬಂಧಿಸಿ ಮೂರು ದಿನ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಹಿರಿಯ ಅಧಿಕಾರಿಗಳ ಸಹಮತದಲ್ಲೇ ಅವ್ಯವಹಾರ ನಡೆದಿದೆ ಎಂಬ ಮಾಹಿತಿ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳನ್ನು ನೋಟಿಸ್ ನೀಡಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಪ್ರಕರಣದ ಮಾಹಿತಿ ನೀಡಿದರು

ಶೋಧ ಕಾರ್ಯ ಚುರುಕು:ಪೊಲೀಸ್ ಕಸ್ಟಡಿಯಲ್ಲಿರುವ ರವಿಕುಮಾರ್ ಚಿಲುಮೆ ಸಂಸ್ಥೆ ಹಾಗೂ ಬ್ಯಾಂಕ್ ಖಾತೆಗಳ ಹಣಕಾಸಿನ ವ್ಯವಹಾರಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ‌. ಆರೋಪಿಗಳ ಖಾತೆಯಿಂದ ಬಿಬಿಎಂಪಿ ಅಧಿಕಾರಿಗಳ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯವಾಗಿದೆ ಎಂಬುದರ ಬಗ್ಗೆಯೂ ಅಧಿಕಾರಿಗಳು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.

ಓದಿ:ಚಿಲುಮೆ ಸಂಸ್ಥೆ ಹಗರಣ: ತನಿಖಾ ಸಂಸ್ಥೆಗಳು ಮಾನಸಿಕ ಹಿಂಸೆ ನೀಡುತ್ತಿವೆ; ಬಿಬಿಎಂಪಿ ಸಿಬ್ಬಂದಿ ಅಳಲು

ABOUT THE AUTHOR

...view details