ಕರ್ನಾಟಕ

karnataka

ETV Bharat / state

ಪಶುಸಂಗೋಪನಾ ಇಲಾಖೆ ಉಪಕರಣಗಳು ಕೊರೊನಾ ಪತ್ತೆಗೆ ಹಸ್ತಾಂತರ: ಸಚಿವ ಪ್ರಭು ಚವ್ಹಾಣ್ - Ministry of Animal Husbandry

ರೋಗ ಪತ್ತೆ ಹಚ್ಚುವಲ್ಲಿ ಲ್ಯಾಬ್​ಗಳ ಪಾತ್ರ ಪ್ರಮುಖವಾಗಿದ್ದು, ಹೆಬ್ಬಾಳ ಪಶು ವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿದ್ದ 2 ಆರ್.ಟಿ ಪಿಸಿಆರ್ (RT-PCR) ಉಪಕರಣಗಳು ಆರೋಗ್ಯ ಇಲಾಖೆಯ ಲ್ಯಾಬ್​ಗಳಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಚವ್ಹಾಣ್​​​ ಹೇಳಿದ್ದಾರೆ.

ಸಚಿವ ಪ್ರಭು ಚವ್ಹಾಣ್
ಸಚಿವ ಪ್ರಭು ಚವ್ಹಾಣ್

By

Published : May 5, 2020, 2:36 PM IST

ಬೆಂಗಳೂರು : ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು, ರೋಗ ಪತ್ತೆ ಹಚ್ಚುವುದಕ್ಕೆ ಬಳಸಲಾಗುವ ಆರ್.ಟಿ-ಪಿಸಿಆರ್ (RT-PCR) ಉಪಕರಣಗಳನ್ನು ಹಸ್ತಾಂತರಿಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

ಪಶುಸಂಗೋಪನೆ ಇಲಾಖೆಯ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ಲ್ಯಾಬ್​ಗಳಲ್ಲಿ ಲಭ್ಯವಿರುವ ಉಪಕರಣಗಳನ್ನು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬಳಸಿಕೊಳ್ಳಲು ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿತ್ತು. ಸದ್ಯ ಈ ಉಪಕರಣಗಳನ್ನು ಕೋವಿಡ್-19 ಪತ್ತೆಗೆ ಬಳಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಸೋಂಕು ಪತ್ತೆಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸಚಿವ ಪ್ರಭು ಚವ್ಹಾಣ್​​​ ತಿಳಿಸಿದ್ದಾರೆ.

ರೋಗ ಪತ್ತೆ ಹಚ್ಚುವಲ್ಲಿ ಲ್ಯಾಬ್​ಗಳ ಪಾತ್ರ ಪ್ರಮುಖವಾಗಿದ್ದು, ಹೆಬ್ಬಾಳ ಪಶು ವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿದ್ದ 2 ಆರ್.ಟಿ ಪಿಸಿಆರ್ (RT-PCR) ಉಪಕರಣಗಳು ಆರೋಗ್ಯ ಇಲಾಖೆಯ ಲ್ಯಾಬ್​ಗಳಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ಧಾರವಾಡ, ಕರ್ನಾಟಕ ಡಿ.ಎನ್.ಎ ಸಂಶೋಧನಾ ಸಂಸ್ಥೆ ಧಾರವಾಡ ಹಾಗೂ ಧಾರವಾಡದ ಕೃಷಿ ಜೈವಿಕ ತಂತ್ರಜ್ಞಾನ ಸಂಸ್ಥೆಯ ಉಪಕರಣಗಳನ್ನು ಸಹ ಕೋವಿಡ್ - 19 ಪತ್ತೆಗೆ ಬಳಸಿಕೊಳ್ಳಲು ಐ.ಸಿ.ಎಂ.ಆರ್ ನಿಯಮಾವಳಿಗಳ ಪ್ರಕಾರ ಉಪಕರಣಗಳನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್ - 19 ರ ಪರೀಕ್ಷೆ ಜೈವಿಕ ಸುರಕ್ಷತಾ ಮಟ್ಟ-2 ರಲ್ಲಿ ಮಾಡಬೇಕಾಗಿರುವುದರಿಂದ ಸಾಕಷ್ಟು ಎಚ್ಚರವಹಿಸಿ ಕಾರ್ಯನಿರ್ವಹಿಸಬೇಕಾಗುತ್ತದೆ. ಸದ್ಯ ಈ ಎಲ್ಲ ಉಪಕರಣಗಳನ್ನು ಬಳಸಿಕೊಂಡಿದ್ದೇ ಆದಲ್ಲಿ ಅಂದಾಜು ಸುಮಾರು 10,000 ಟೆಸ್ಟ್​​​​​​ಗಳನ್ನು ಮಾಡಬಹುದಾಗಿದೆ. ಅಲ್ಲದೇ ಉಪಕರಣಗಳ ಮೇಲೆ ಕಾರ್ಯ ನಿರ್ವಹಿಸುವ ನುರಿತ ತಂತ್ರಜ್ಞರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details