ಕರ್ನಾಟಕ

karnataka

ETV Bharat / state

ಆನೇಕಲ್​: ಪ್ರಾತ್ಯಕ್ಷಿಕೆ ಮೂಲಕ ಅಂಗನವಾಡಿ ಸಹಾಯಕಿಯರಿಗೆ ಕೊರೊನಾ ಜಾಗೃತಿ - bangalore news

ಆನೇಕಲ್​ ಪಟ್ಟಣದಲ್ಲಿ ಕೊರೊನಾ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಪೂರ್ವಭಾವಿ ಅಗತ್ಯ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅಂಗನವಾಡಿ ಸಹಾಯಕಿಯರಿಗೆ ಅರಿವು ಮೂಡಿಸಲಾಯಿತು.

Anekal: Corona Awareness for Anganwadi Helpers by Demonstration
ಆನೇಕಲ್​: ಪ್ರಾತ್ಯಕ್ಷಿಕೆ ಮೂಲಕ ಅಂಗನವಾಡಿ ಸಹಾಯಕಿಯರಿಗೆ ಕೊರೊನಾ ಜಾಗೃತಿ

By

Published : Jun 30, 2020, 1:37 AM IST

ಆನೇಕಲ್ (ಬೆಂಗಳೂರು):ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಒನ್ ಬಿಲಿಯನ್ ಲಿಟ್ರೇಚರ್ ಸಂಸ್ಥೆ ನೇತೃತ್ವದಲ್ಲಿ ಕೊರೊನಾ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಪೂರ್ವಭಾವಿ ಅಗತ್ಯ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅಂಗನವಾಡಿ ಸಹಾಯಕಿಯರಿಗೆ ಅರಿವು ಮೂಡಿಸಲಾಯಿತು.

ಆನೇಕಲ್​ನಲ್ಲಿ ಪ್ರಾತ್ಯಕ್ಷಿಕೆ ಮೂಲಕ ಅಂಗನವಾಡಿ ಸಹಾಯಕಿಯರಿಗೆ ಕೊರೊನಾ ಜಾಗೃತಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಸ್ವತಃ ತಯಾರಿಸಿದ ಮಾಸ್ಕ್ ವಿತರಿಸಿ, ಪದೇಪದೇ ಉಪಯೋಗಿಸುವ ವಿಧಾನ, ಆಗಾಗ ಕೈತೊಳೆಯುವ ಪರಿ ಹಾಗೂ ಆರು ಅಡಿ ಸಾಮಾಜಿಕ ಅಂತರ ಕಾಪಾಡುವುದರ ಬಗ್ಗೆ ಅರಿವು ಮೂಡಿಸಲಾಯಿತು.

ಅಂಗನವಾಡಿ ವಾರಿಯರ್ಸ್ ಯಾವ ರೀತಿ ಮುಂಜಾಗೃತಾ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಲಾಯಿತು.

ABOUT THE AUTHOR

...view details