ಬೆಂಗಳೂರು:ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಮುಷ್ಕರ ನಡೆಯುತ್ತಿದೆ. ಈ ವಿಷಯವಾಗಿ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಕೆಎಸ್ಆರ್ಟಿಸಿ ಸ್ಟಾಫ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಅನಂತ ಸುಬ್ಬರಾವ್ ಭಾಗಿಯಾಗಿದ್ದರು. ಬಳಿಕ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅನಂತ ಸುಬ್ಬರಾವ್ 'ಈ ಪ್ರತಿಭಟನೆ ಸದ್ಯ ಹೈಜಾಕ್ ಆಗಿದ್ದು ನಂತರ ಸರಿಹೋಗುತ್ತೆ' ಎಂದು ಮುಷ್ಕರದ ಮುಖ್ಯಸ್ಥಿಕೆ ವಹಿಸಿದ್ದಾರೆ ಎನ್ನಲಾದ ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಓದಿ: LIVE UPDATE: ರಾಜ್ಯಾದ್ಯಂತ ಸಾರಿಗೆ ನೌಕರರ ಬೃಹತ್ ಪ್ರತಿಭಟನೆ: ಕೆಲವೆಡೆ ಬಸ್ ಸಂಚಾರದಲ್ಲಿ ವ್ಯತ್ಯಯ
ಆಂಧ್ರಪ್ರದೇಶದಲ್ಲಿ ಸಾರಿಗೆ ನೌಕರರಿಗೆ ಒಂದು ವರ್ಷದಿಂದ ಸಂಬಳ ಕೊಟ್ಟಿಲ್ಲ. ಅಲ್ಲಿ ಅಧ್ಯಯನ ಮಾಡಲು ಸಮಿತಿ ಕಳುಹಿಸಿ ಎಂದು ಹೇಳಿದ್ದೆವು. ಸಾರಿಗೆ ನೌಕರರು ಸರ್ಕಾರಿ ನೌಕರರನ್ನಾಗಿ ಏಕೆ ಮಾಡಬೇಕು ಎಂದು ಹೇಳುತ್ತಿಲ್ಲ. ನೋಟಿಸ್ ಕೊಡದೆ ಹೋರಾಟ ಮಾಡುತ್ತಿದ್ದಾರೆ. ಮುಷ್ಕರ ಮಾಡುವವರನ್ನು ಸಚಿವರು ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ ಎನ್ನಲಾಗಿದೆ ಎಂದರು.
ಇದೇ ವೇಳೆ ಅವರು, ನೀವು ಎಷ್ಟು ದಿನ ಟ್ರೇಡ್ ಯೂನಿಯನ್ ಲೀಡ್ ಮಾಡಿದ್ದೀರಿ?, ದಿನ ನಿತ್ಯದ ಸಮಸ್ಯೆಗಳಿಗೆ ಕೋಡಿಹಳ್ಳಿ ಬರಲು ಸಾಧ್ಯವಿಲ್ಲ ಎಂದು ಸುಬ್ಬರಾವ್ ಹೇಳಿದರು.