ಕರ್ನಾಟಕ

karnataka

ETV Bharat / state

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅನಂತ್ ಕುಮಾರ್ ಪಾತ್ರ ದೊಡ್ಡದು.. ಸಿಎಂ ಯಡಿಯೂರಪ್ಪ

ಜಯನಗರದಲ್ಲಿ ಆಯೋಜಿಸಲಾಗಿದ್ದ, ದಿವಂಗತ ಅನಂತ್ ಕುಮಾರ್ ಅವರ 60 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಕಟ್ಟಲು ಅನಂತ್​ಕುಮಾರ್​​ ಕೊಟ್ಟ ಸಮಯ, ಕೆಲಸ ಮಾಡಿದ ರೀತಿ ಅವಿಸ್ಮರಣೀಯ. ಪಕ್ಷ ಕಟ್ಟಿದ ಧೀಮಂತ ನಾಯಕ ಅವರು ಎಂದರು.

ಅನಂತ್ ಕುಮಾರ್ ಅವರ 60ನೇ ಜನ್ಮ ದಿನಾಚರಣೆ ಕಾರ್ಯಕ್ರಮ

By

Published : Sep 22, 2019, 10:21 PM IST

ಬೆಂಗಳೂರು:ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅನಂತ್ ಕುಮಾರ್ ಪಾತ್ರ ಹಿರಿದು ಎಂದು ಸಿಎಂ ಯಡಿಯೂರಪ್ಪ ಅನಂತ್ ಕುಮಾರ್ ಅವರ 60ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದ್ರು.

ಜಯನಗರದಲ್ಲಿ ಆಯೋಜಿಸಲಾಗಿದ್ದ, ದಿವಂಗತ ಅನಂತ್ ಕುಮಾರ್ ಅವರ 60ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಕಟ್ಟಲು ಅವರು ಕೊಟ್ಟ ಸಮಯ, ಕೆಲಸ ಮಾಡಿದ ರೀತಿ ಅವಿಸ್ಮರಣೀಯ. ಪಕ್ಷ ಕಟ್ಟಿದ ಧೀಮಂತ ನಾಯಕ ಅವರು. ಅನಂತ್ ಕುಮಾರ್ ಇನ್ನೂ ಬಹಳ ವರ್ಷ ಬದುಕಬೇಕಿತ್ತು. ಕೇಂದ್ರದಲ್ಲಿ ಬಹಳ ವರ್ಷ ಸಚಿವರಾಗಿ ಇದ್ದವರು. ನನಗೆ ಐದು‌ ನಿಮಿಷದಲ್ಲಿ ಅದ್ಭುತವಾಗಿ ಭಾಷಣ ತಯಾರಿಸಿಕೊಡ್ತಿದ್ದರು. ಅನಂತ್‌ಕುಮಾರ್ ನೆನಪಿನ ಶಕ್ತಿಗೆ ಸರಿ ಸಾಟಿ ಇಲ್ಲ. ಬೆಂಗಳೂರಿನ ಅಭಿವೃದ್ಧಿಯ ಕನಸು ಕಂಡವರು ಎಂದು ಸ್ಮರಿಸಿದರು.

ಅನಂತ್ ಕುಮಾರ್ ಅವರ 60ನೇ ಜನ್ಮ ದಿನಾಚರಣೆ ಕಾರ್ಯಕ್ರಮ

ಅನಂತ್ ಕುಮಾರ್ ಹಿಂದಿ ಜ್ಞಾನ ಅದ್ಭುತ. ದೆಹಲಿಯಲ್ಲಿ ತಮ್ಮ ಮನೆಯಲ್ಲಿ ಅನಂತ್ ಕುಮಾರ್ ಒಬ್ಬರೇ ಇದ್ದಿದ್ದು ನಾನು ಎಂದೂ ನೋಡಿಲ್ಲ. ಸದಾ ಯಾರಾದ್ರೂ ನಾಯಕರು, ಅಧಿಕಾರಿಗಳು ಅವರ ಸುತ್ತ ಇರುತ್ತಿದ್ದರು. ಅವರ ಅನುಪಸ್ಥಿತಿ ಕೇಂದ್ರ ಮತ್ತು ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ಮುಂದಿನ ಹೊಸ ಪೀಳಿಗೆಗೆ ಅನಂತ್ ಕುಮಾರ್ ಪ್ರತಿಷ್ಠಾನ ದಾರಿ ದೀಪ ಆಗಲಿದೆ.

ಅನಂತ್ ಕುಮಾರ್ ಪ್ರತಿಷ್ಠಾನಕ್ಕೆ ಜೆ.ಪಿ.ನಡ್ಡಾ ಚಾಲನೆ:

ಇದೇ ವೇಳೆ‌ ಅನಂತ್ ಕುಮಾರ್ ಪ್ರತಿಷ್ಠಾನಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಿದರು.ಬಳಿಕ ಮಾತನಾಡಿದ ಜೆ ಪಿ ನಡ್ಡಾ, ಅನಂತ್ ಕುಮಾರ್ ನನಗಿಂತ ಹಿರಿಯರು. ಆದರೆ, ಅವರು ನನ್ನ ಜತೆ ಹಿರಿಯ ಅಂತಾ ತೋರಿಸದೇ ಗೆಳೆಯನ ಹಾಗೆ ಇದ್ದರು. ಪಕ್ಷ ಸಂಘಟನೆ, ಸಮಾಜ‌ ಪರಿವರ್ತನೆ ವಿಚಾರದಲ್ಲಿ ಅವರು ಎಲ್ಲರಿಗೂ ಪ್ರೇರಣೆ. ಅವರ ಜೊತೆ ಕೆಲಸ ಮಾಡುವ ಸೌಭಾಗ್ಯ ನಮಗೆ ಸಿಕ್ತು. ನಾನು ಅವರು ವಿದ್ಯಾರ್ಥಿ‌ ಪರಿಷತ್​ನಿಂದಲೂ ಪರಿಚಯಸ್ಥರು. 2010 ರಿಂದ ಕೇಂದ್ರ ಸಚಿವರಾಗಿ ಅವರ ಜೊತೆ ಕೆಲಸ ಮಾಡೋ ಸೌಭಾಗ್ಯ ಸಿಕ್ತು ಎಂದು ಸ್ಮರಿಸಿದರು.

ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ, ಬೆಂಗಳೂರಿನಲ್ಲಿ ಸಿಪೆಟ್ ಸಂಸ್ಥೆ‌ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಾಣವಾಗುತ್ತಿದೆ. ಅದಕ್ಕೆ ದಿವಂಗತ ಅನಂತ್ ಕುಮಾರ್ ಹೆಸರಿಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ABOUT THE AUTHOR

...view details