ಕರ್ನಾಟಕ

karnataka

ETV Bharat / state

PSI scam: ಪಿಎಸ್‌ಐ ಹಗರಣದಲ್ಲಿ ಉತ್ತರ ಪತ್ರಿಕೆಗಳ ತಿದ್ದಲು ಅಮೃತ್ ಪೌಲ್​​​ ಕಾರಣ.. ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್​ - ಆರೋಪಿ ಐಪಿಎಸ್ ಅಧಿಕಾರಿ ಅಮ್ರಿತ್ ಪೌಲ್

ಆರೋಪಿ ನೀಡಿರುವ ವೈದ್ಯಕೀಯ ರಜೆಯಲ್ಲಿದ್ದುದಾಗಿ ನೀಡಿರುವ ಪ್ರಮಾಣ ಪತ್ರ ಸುಳ್ಳು ಎಂದು ಸರ್ಕಾರದ ಅಭಿಯೋಜಕ ಪ್ರಸನ್ನ ಕುಮಾರ್​ ವಾದ ಮಂಡಿಸಿದ್ದಾರೆ.

Highcourt
ಹೈಕೋರ್ಟ್​

By

Published : Jul 10, 2023, 10:55 PM IST

ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಪ್ರಕರಣ 35ನೇ ಆರೋಪಿ ಐಪಿಎಸ್ ಅಧಿಕಾರಿ ಅಮ್ರಿತ್ ಪೌಲ್ ಉತ್ತರ ಪತ್ರಿಕೆಗಳನ್ನು ತಿದ್ದಲು ಕಾರಣ ಎಂದು ಸರ್ಕಾರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಅಮೃತ್ ಪೌಲ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಎಂ. ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಸೋಮವಾರ ಸರ್ಕಾರದ ಪರ ವಾದ ಮಂಡಿಸಿ ವಿಶೇಷ ಅಭಿಯೋಜಕರಾದ ಪ್ರಸನ್ನ ಕುಮಾರ್, ಹಗರಣದ ಕುರಿತು ವಿವರಿಸಿದರು.

ಅಲ್ಲದೆ, ಹಗರಣ ನಡೆದ ವೇಳೆ ಅಮೃತ್ ಪೌಲ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದರು ಮತ್ತು ಆ ಸಮಯದಲ್ಲಿ ಅವರು ಸುಳ್ಳು ದಾಖಲೆಗಳ ಮೂಲಕ ಕಚೇರಿಗೆ ವೈದ್ಯಕೀಯ ರಜೆ ಹಾಕುವ ಮೂಲಕ ಹಗರಣ ನಡೆಯಲು ಕಾರಣವಾಗಿದ್ದರು. ಉತ್ತರ ಪತ್ರಿಕೆಗಳನ್ನು ತಿದ್ದಿದ 2021 ರ ಅಕ್ಟೋಬರ್ 7, 8 ಮತ್ತು 16 ರಂದು ಆರೋಪಿಯು ವೈದ್ಯಕೀಯ ರಜೆಯಲ್ಲಿ ಇದ್ದುದಾಗಿ ಹೇಳಿ ಪ್ರಮಾಣ ಪತ್ರ ನೀಡಿದ್ದಾರೆ.

ಆದರೆ, ಅವರು ಆ ದಿನಗಳಂದು ತಮ್ಮ ಪ್ರಮಾಣ ಪತ್ರದಲ್ಲಿ ಹೇಳಿರುವ ಯಲಹಂಕ ನ್ಯೂ ಟೌನ್‌ನಲ್ಲಿರುವ ನವಚೇತನ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆ ಪಡೆದೇ ಇಲ್ಲ. ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಅಂತೆಯೇ, ಆ ದಿನಗಳಲ್ಲಿ ಸ್ಟ್ರಾಂಗ್ ರೂಮ್ ಬೀಗಗಳನ್ನು ತಮ್ಮ ವೈಯಕ್ತಿಕ ಕೊಠಡಿಯಲ್ಲಿ ಇರಿಸಿದ್ದರು. ಅಲ್ಲಿಂದ ಬೇರೆಯವರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ವಿವರಿಸಿದರು.

ಸ್ಟ್ರಾಂಗ್ ರೂಮ ಅನ್ನು ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಮತ್ತು ಬೆರಳಚ್ಚು ಮೂಲಕವಷ್ಟೇ ಅಲ್ಲಿಗೆ ಪ್ರವೇಶ ಸಾಧ್ಯವಿತ್ತು. ಆದರೆ, ಈ ಇದನ್ನೆಲ್ಲಾ ದಾಟಿ ಹಗರಣ ನಡೆಸಲಾಗಿದೆ. ಇದೇ ಹಗರಣದಲ್ಲಿ ಶಂಭುಲಿಂಗಯ್ಯ ಎಂಬ ಖಾಸಗಿ ವ್ಯಕ್ತಿ 1.99 ಕೋಟಿ ಸಂಗ್ರಹಿಸಿಕೊಂಡಿದ್ದಾರೆ.

ಇವರು ಕೊಡುತ್ತಿದ್ದ ಲಕ್ಷಗಳ ಮೊತ್ತವನ್ನು ಶಂಭುಲಿಂಗಯ್ಯ ಎರಡು ಸೊನ್ನೆಗಳನ್ನು ಕಡಿಮೆ ಮಾಡಿ ಸಾವಿರದ ಲೆಕ್ಕದಲ್ಲಿ ಪುಸ್ತಕದಲ್ಲಿ ನಮೂದು ಮಾಡಿಕೊಂಡಿದ್ದರು ಎಂದು ವಿವರಿಸಿದ್ದಾರೆ. ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಎಂ. ಎಸ್. ಶ್ಯಾಮಸುಂದರ್, ವಿರೋಧ ವ್ಯಕ್ತಪಡಿಸಿದರು. ವಾದ ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿತು.

ಇದನ್ನೂ ಓದಿ :ಪಿಎಸ್​ಐ ಹಗರಣ: ಆರೋಪ ಪಟ್ಟಿ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ಅಮೃತ್ ಪೌಲ್ ಪರ ವಕೀಲರ ಆಕ್ಷೇಪ

ABOUT THE AUTHOR

...view details