ಬೆಂಗಳೂರು:ಉದ್ಯಾನ ನಗರಿಯಲ್ಲಿ ಆ್ಯಂಬುಲೆನ್ಸ್ ಸಮಸ್ಯೆ ಇರುವುದು ತಿಳಿದಿರುವ ವಿಷಯ. ಇದೀಗ ಆ ಸಮಸ್ಯೆಯೇ ಜನರಿಗೆ ಕಂಟಕವಾಗುತ್ತಿದೆ. ಯಾಕೆಂದರೆ ಗಂಟೆಗಟ್ಟಲೇ ಕಾದರೂ ಆ್ಯಂಬುಲೆನ್ಸ್ ಇನ್ನೂ ಬಂದಿಲ್ಲ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಮಹಿಳೆಗೆ ಕೊರೊನಾ ದೃಢ: ಗಂಟೆಗಟ್ಟಲೇ ಕಾದರೂ ಬಾರದ ಆ್ಯಂಬುಲೆನ್ಸ್..! - Ambulance problem in bangalore
ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಆ್ಯಂಬುಲೆನ್ಸ್ಗೆ ಕರೆ ಮಾಡಿ ಗಂಟೆಗಟ್ಟಲೇ ಕಾದರೂ ಆ್ಯಂಬುಲೆನ್ಸ್ ಬರದಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.
ಗಂಟೆಗಟ್ಟಲೆ ಕಾದರೂ ಬಾರದ ಆ್ಯಂಬುಲೆನ್ಸ್
ಬಸವೇಶ್ವರ ನಗರದ ನೇತಾಜಿ ಸುಭಾಷ್ ಚಂದ್ರ ಗ್ರೌಂಡ್ ಬಳಿ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಹೀಗಾಗಿ ಬೆಳಗ್ಗೆ 8 ಗಂಟೆಗೆ ಆ್ಯಂಬುಲೆನ್ಸ್ಗೆ ಕರೆ ಮಾಡಿ, ಕಾದು ಕಾದು ಸುಸ್ತಾದರೆ ವಿನಃ ಆ್ಯಂಬುಲೆನ್ಸ್ ಸದ್ದು ಮಾತ್ರ ಕೇಳಿಸಿಲ್ಲ.
ಇತ್ತ ಕೊರೊನಾ ಪಾಸಿಟಿವ್ ಇರುವುದು ತಿಳಿದ ಸ್ಥಳೀಯ ನಿವಾಸಿಗಳಲ್ಲಿ ಭೀತಿ ಶುರುವಾಗಿದೆ ಎಂದು ಸೋಂಕಿತ ಮಹಿಳೆಯೇ ನೋವು ತೋಡಿಕೊಂಡಿದ್ದಾರೆ. ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಜನರು ಹೈರಾಣಾಗಿದ್ದಾರೆ.