ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಫೋಟೋ ಕಳುಹಿಸಿ ಬೆದರಿಕೆ ಹಾಕಲಾಗಿದೆ ಎಂದು ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಪೊಲೀಸರಿಗೆ ದೂರು ನೀಡಿದ್ದಾರೆ. ಆಕ್ಷೇಪಾರ್ಹ ವೆಬ್ಸೈಟ್ನ ಸ್ಕ್ರೀನ್ ಶಾಟ್ ಲಗತ್ತಿಸಿ ತನ್ನನ್ನು ಟ್ಯಾಗ್ ಮಾಡಲಾಗಿದೆ ಎಂದು @Cyber_Huntss (ಸೈಬರ್ ಹಂಟ್ಸ್) ಹೆಸರಿನ ಟ್ವಿಟರ್ ಖಾತೆಯ ವಿರುದ್ಧ ಅವರು ದೂರು ದಾಖಲಿಸಿದ್ದಾರೆ.
ಅಲ್ಲದೇ ತನ್ನ ವಿಳಾಸವನ್ನು ಎಲ್ಲರಿಗೂ ತಿಳಿಯುವಂತೆ ಪ್ರಕಟಿಸಿರುವ 15 ವಿವಿಧ ಟ್ವಿಟರ್ ಖಾತೆಗಳ ವಿರುದ್ಧವು ಆರೋಪಿಸಿರುವ ಜುಬೈರ್, ತನಗೆ ಜೀವ ಬೆದರಿಕೆ ಹಾಕಲಾಗಿದೆ. ಎರಡು ಜನಾಂಗದವರ ಮಧ್ಯೆ ದ್ವೇಷವನ್ನುಂಟು ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಡಿ.ಜೆ.ಹಳ್ಳಿ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.