ಕರ್ನಾಟಕ

karnataka

ETV Bharat / state

ಮಹಿಳಾ ರೋಗಿಗಳ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿದ ಆರೋಪ: ವೈದ್ಯ ಅರೆಸ್ಟ್​​ - ವೆಂಕಟರಮಣ ಬಂಧಿತ ವೈದ್ಯ

ಕ್ಲಿನಿಕ್​ಗೆ ಬರುವ ಮಹಿಳಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸೋಗಿನಲ್ಲಿ, ಅವರ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡುತ್ತಿದ್ದ ಆರೋಪದ ಮೇಲೆ ವೈದ್ಯನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Allegations of making a video of undressing female
Allegations of making a video of undressing female

By

Published : Nov 16, 2022, 6:31 PM IST

Updated : Nov 16, 2022, 6:53 PM IST

ಬೆಂಗಳೂರು:ಚಿಕಿತ್ಸೆಗಾಗಿ ಕ್ಲಿನಿಕ್​ಗೆ ಬರುವ ಮಹಿಳಾ ರೋಗಿಗಳಿಗೆ ಚಿಕಿತ್ಸೆ ಕೊಡುವ ಸೋಗಿನಲ್ಲಿ ಬಟ್ಟೆ ತೆಗೆಸಿ ಅಂಗಾಂಗ ಮುಟ್ಟಿ, ರಹಸ್ಯವಾಗಿ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದ ವೈದ್ಯನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕಳೆದ 10 ವರ್ಷಗಳ ಕಾಲ ಮ್ಯಾನೇಜರ್​ ಆಗಿ ಕೆಲಸ ಮಾಡಿ, ನಂತರ ಮೆಜೆಸ್ಟಿಕ್ ಬಳಿಯ ಆಯುರ್ವೇದ ಕಾಲೇಜಿನಲ್ಲಿ ಪರಿಚಿತ ವ್ಯಕ್ತಿಯೊಬ್ಬರ ನೆರವಿನಿಂದ ಜಯನಗರದ ಆ್ಯಕೂಪೈ ಇನ್​ಸ್ಟಿಟ್ಯೂಟ್​ನಲ್ಲಿ ಎರಡು ವರ್ಷಗಳ ಕಾಲ ಆಕ್ಯೂಪಂಕ್ಚರ್​​ ಚಿಕಿತ್ಸೆ ತರಬೇತಿ ಪಡೆದಿದ್ದ. ಕಳೆದ ನಾಲ್ಕು ವರ್ಷಗಳಿಂದ ಕ್ಲಿನಿಕ್ ಓಪನ್ ಮಾಡಿದ್ದ ಎನ್ನಲಾಗ್ತಿದೆ.

ಕ್ಲಿನಿಕ್​ಗೆ ಬರುವ ಮಹಿಳಾ ರೋಗಿಗಳಿಗೆ ಚಿಕಿತ್ಸೆ ಕೊಡಿಸುವ ಸೋಗಿನಲ್ಲಿ ಬಟ್ಟೆ ಬಿಚ್ಚಿಸಿ ರಹಸ್ಯವಾಗಿ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಮಹಿಳಾ ರೋಗಿಯ ಪತಿಗೆ ಕರೆ ಮಾಡಿ ವಿಡಿಯೋ ಕಳುಹಿಸಿದ್ದಾಗ ವೈದ್ಯನ ಕರಾಳಮುಖ ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು.

ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ವೈದ್ಯ ಬಂಧನ

ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ವೈದ್ಯನನ್ನು ಸಿಸಿಬಿ ಮಹಿಳಾ ಸಂರಕ್ಷದಳದ ಅಧಿಕಾರಿಗಳು ಆಂಧ್ರದಲ್ಲಿ ಸೆರೆ ಹಿಡಿದಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ತಿಳಿಸಿದ್ದಾರೆ.

Last Updated : Nov 16, 2022, 6:53 PM IST

ABOUT THE AUTHOR

...view details