ಕರ್ನಾಟಕ

karnataka

ETV Bharat / state

ಪಂಚ ರಾಜ್ಯ ಚುನಾವಣೆಗೆ ರಾಜ್ಯದ ಹಣ ಬಳಕೆ ಆರೋಪ ಸುಳ್ಳು: ಅವರು ನೋಡಿದ್ದಾರಾ ಸಿಎಂ ಪ್ರಶ್ನೆ - ಪಂಚರಾಜ್ಯಗಳ ಚುನಾವಣೆ

ಬಿಜೆಪಿ ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಆಗುವುದಿಲ್ಲ, ಬಿಜೆಪಿಗೆ ವಸ್ತುಸ್ಥಿತಿಗೆ ಬಗ್ಗೆ ಅರಿವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್​ ನೀಡಿದ್ದಾರೆ.

M Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ

By ETV Bharat Karnataka Team

Published : Oct 13, 2023, 1:34 PM IST

Updated : Oct 13, 2023, 3:31 PM IST

ಪಂಚ ರಾಜ್ಯ ಚುನಾವಣೆಗೆ ರಾಜ್ಯದ ಹಣ ಬಳಕೆ ಆರೋಪ ಸುಳ್ಳು: ಅವರು ನೋಡಿದ್ದಾರಾ ಸಿಎಂ ಪ್ರಶ್ನೆ

ಬೆಂಗಳೂರು:ರಾಜ್ಯದ ಹಣ ಪಂಚರಾಜ್ಯಗಳ ಚುನಾವಣೆಗೆ ಬಳಕೆ ಮಾಡುತ್ತಾರೆ ಎಂಬ ಮಾಜಿ ಸಚಿವ ಮುನಿರತ್ನ ಅವರ ಆರೋಪ ಸುಳ್ಳು, ಅದನ್ನು ಅವರು ನೋಡಿದ್ದಾರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುನಿರತ್ನ ಅವರು ಮಾಡಿರುವ ಈ ಆರೋಪದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನೀನು ನೋಡಿದ್ದೀಯಾ? ಅವರು ನೋಡಿದ್ದಾರಾ?. ಆರೋಪ ಮಾಡೋಕೆ ಏನು?. ಎಲ್ಲಾ ಆರೋಪಗಳು ಸುಳ್ಳುಗಳಿಂದ ಕೂಡಿವೆ. ಬಿಜೆಪಿ ಶಾಸಕರ ಆರೋಪಗಳು ನಿಜವಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಿನ್ನೆಯಿಂದ ಬೆಂಗಳೂರಿನ ಹಲವೆಡೆ ಐಟಿ ದಾಳಿಗಳು ನಡೆದಿವೆ. ಈ ದಾಳಿ ವೇಳೆ ಮಾಜಿ ಕಾರ್ಪೊರೇಟರ್​ ಒಬ್ಬರ ಸಂಬಂಧಿಕನ ಮನೆಯಲ್ಲಿ ಸುಮಾರು 42 ಕೋಟಿ ರೂ ನಗದು ಸಿಕ್ಕಿದೆ. ಈ ವಿಚಾರ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಣ ವಾಗ್ವಾದಕ್ಕೆ ಕಾರಣವಾಗಿದೆ.

ವಿದ್ಯುತ್ ಬೇರೆಡೆ ಮಾರದಂತೆ ಆದೇಶ:ಮಳೆ ಕಡಿಮೆಯಾಗಿದ್ದು ಮಾತ್ರವಲ್ಲದೆ ರಾಜ್ಯದಲ್ಲಿ ಹಾಗೂ ಬೇಸಿಗೆ ರೀತಿಯ ವಾತಾವರಣ ಇದೆ. ಇದರಿಂದಾಗಿ ವಿದ್ಯುತ್ತಿಗೆ ಬೇಡಿಕೆ ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದ್ದು, ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ವರ್ಷ ಇದೇ ವೇಳೆಗೆ 900 ಮೆಗಾ ವ್ಯಾಟ್ ವಿದ್ಯುತ್​ ಬಳಸಲಾಗುತ್ತಿತ್ತು. ಈ ಬಾರಿ 1500 ರಿಂದ 1600 ಮೆಗಾ ವ್ಯಾಟ್ ವಿದ್ಯುತ್​​ಗೆ ಬೇಡಿಕೆ ಇರುವುದರಿಂದ ತೊಂದರೆಯಾಗಿದೆ. ವಿದ್ಯುತ್ ಅನ್ನು ಹೊರಗಿನಿಂದ ಹೇಗೆ ಖರೀದಿಸುವುದು ಎಂಬ ಚರ್ಚಿಸಲು ಇಂದು ಮಧ್ಯಾಹ್ನ ಸಭೆ ಕರೆಯಲಾಗಿದೆ. ವಿದ್ಯುತ್ ಉತ್ಪಾದನೆ ಮಾಡುವವರು ಸರ್ಕಾರಕ್ಕೆ ಮಾರಾಟ ಮಾಡಬೇಕು, ಬೇರೆ ಎಲ್ಲಿಯೂ ಮಾರಬಾರರು ಎಂದು ನಿನ್ನೆ ಅದೇಶವನ್ನೂ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.

ಬಿಜೆಪಿಗೆ ವಸ್ತುಸ್ಥಿತಿ ತಿಳಿದಿಲ್ಲ: ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಬಿಜೆಪಿಯವರು ಹೇಳಿದ್ದಕ್ಕೆಲ್ಲ ಉತ್ತರ ನೀಡಲು ಆಗುವುದಿಲ್ಲ. ಅವರು ರಾಜಕೀಯವಾಗಿ ಮಾತನಾಡುತ್ತಾರೆ. ವಸ್ತುಸ್ಥಿತಿ ಬಗ್ಗೆ ಅವರಿಗೆ ತಿಳಿದಿದೆಯೇ. ಮಳೆ ಇಲ್ಲದೇ ಬರಗಾಲ ಬಂದು ತೊಂದರೆಯಾಗಿದೆ. ಆದರೂ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಅವರು ಹೇಳಿದಂತೆ ಸಂಪೂರ್ಣ ಲೋಡ್ ಶೆಡ್ಡಿಂಗ್ ಆಗಿಲ್ಲ. ಮೂರು ಫೇಸ್​ನಲ್ಲಿ 7 ಗಂಟೆ ವಿದ್ಯುತ್ ನೀಡಬೇಕೆಂದಿರುವುದನ್ನು ಕೊಡಲು ಆಗುತ್ತಿಲ್ಲ ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಕೆಂಪಣ್ಣ ಅವರ ಜೊತೆ ನಾಳೆ ಮಾತನಾಡುತ್ತೇನೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಆರೋಪದ ವಿಚಾರವಾಗಿ ಮಾತನಾಡಿದ ಅವರು, ನಾಳೆ ಕೆಂಪಣ್ಣ ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ :ಕಿತ್ತೂರು ಚೆನ್ನಮ್ಮ, ಟಿಪ್ಪು ಸುಲ್ತಾನ್​ ಸ್ವಾಭಿಮಾನದ ಹೋರಾಟ ನಮ್ಮೆಲ್ಲರಿಗೆ ಸ್ಫೂರ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Last Updated : Oct 13, 2023, 3:31 PM IST

ABOUT THE AUTHOR

...view details