ಬೆಂಗಳೂರು:ಶಾಲೆಯಲ್ಲಿ ಬೈಬಲ್ ಶಿಕ್ಷಣ ಕಡ್ಡಾಯಗೊಳಿಸುವ ಮೂಲಕ ವಿರೋಧಕ್ಕೆ ಕಾರಣವಾಗಿದ್ದ ಕ್ಲಾರೆನ್ಸ್ ಹೈಸ್ಕೂಲ್ನ ಪ್ರಾಂಶುಪಾಲರು ಈ ಬಗ್ಗೆ ಸ್ಪಷ್ಟನೆ ನೀಡಲು ಹಿಂದೇಟು ಹಾಕಿದ್ದಾರೆ. ಕ್ರಿಶ್ಚಿಯನ್ ಅಲ್ಲದ ಮಕ್ಕಳಿಗೂ ಬೈಬಲ್ ಕಲಿಕೆಗೆ ಒತ್ತಾಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರಾಂಶುಪಾಲರಾದ ಮ್ಯಾಥ್ಯು ಜಾರ್ಜ್ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಸಮಾಜದಲ್ಲಿ ಕೆಲವು ಜನ ಶಾಲೆಯ ಪಾಲಿಸಿ ಕುರಿತು ಅಸಮಾಧಾನಗೊಂಡಿರುವುದು ಗೊತ್ತಾಗಿದೆ. ನಾವು ಶಾಂತಿಪ್ರಿಯರು, ವಕೀಲರನ್ನು ಸಹ ಈ ವಿಚಾರವಾಗಿ ಸಂಪರ್ಕಿಸಿದ್ದೇವೆ ಎಂದಿದ್ದಾರೆ.
ಕ್ರಿಶ್ಚಿಯನ್ ಅಲ್ಲದ ಮಕ್ಕಳಿಗೂ ಬೈಬಲ್ ಕಲಿಕೆಗೆ ಒತ್ತಾಯ ಆರೋಪ: ಪ್ರಾಂಶುಪಾಲರು ಹೇಳಿದ್ದೇನು ?
ಕ್ರಿಶ್ಚಿಯನ್ ಅಲ್ಲದ ಮಕ್ಕಳಿಗೂ ಬೈಬಲ್ ಕಲಿಕೆಗೆ ಒತ್ತಾಯ ಮಾಡಲಾಗುತ್ತಿದೆ ಎಂಬ ಆರೋಪ ಕ್ಲಾರೆನ್ಸ್ ಹೈಸ್ಕೂಲ್ ವಿರುದ್ಧ ಕೇಳಿಬಂದಿದೆ. ಪ್ರಾಂಶುಪಾಲರಾದ ಮ್ಯಾಥ್ಯು ಜಾರ್ಜ್ ಮಾಧ್ಯಮಗಳೊಂದಿಗೆ ಮಾತನಾಡಿ,ಕಾನೂನಿನ ಎಲ್ಲ ನಿಯಮಗಳನ್ನು ಪಾಲಿಸುತ್ತೇವೆ. ಯಾವುದೇ ಕಾರಣಕ್ಕೂ ನಿಯಮ ಮೀರುವುದಿಲ್ಲ ಎಂದಿದ್ದಾರೆ.
ಕ್ಲಾರೆನ್ಸ್ ಹೈಸ್ಕೂಲ್
ಕಳೆದ ನೂರು ವರ್ಷದಿಂದ ಶಾಲೆ ನಡೆಸುತ್ತಿದ್ದೇವೆ. ಕಾನೂನಿನ ಎಲ್ಲ ನಿಯಮಗಳನ್ನು ಪಾಲಿಸುತ್ತೇವೆ. ಯಾವುದೇ ಕಾರಣಕ್ಕೂ ನಿಯಮ ಮೀರುವುದಿಲ್ಲ. ಕಾನೂನಿನ ನಿಯಮಗಳ ಪ್ರಕಾರವೇ ಶಾಲೆ ನಡೆಯುತ್ತಿದೆ. ಉಳಿದಂತೆ ಯಾವುದೇ ವಿಚಾರದ ಕುರಿತು ಕಾಮೆಂಟ್ ಮಾಡುವುದಿಲ್ಲ ಎಂದು ಪ್ರಿನ್ಸಿಪಾಲ್ ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಬೈಬಲ್ ಶಿಕ್ಷಣ ಕಡ್ಡಾಯ?: ಆರೋಪವೇನು?