ಬೆಂಗಳೂರು:ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ಹಿನ್ನೆಲೆ ಸರ್ವ ಸಂಘಟನೆಗಳ ಒಕ್ಕೂಟವು ಸಿಸಿಬಿ ಕಚೇರಿಗೆ ಬಂದು ಒಕ್ಕೂಟದ ಮುಖಂಡ ಸಿ. ಎಂ. ಶಿವಕುಮಾರ್ ನೇತೃತ್ವದಲ್ಲಿ ದೂರು ನೀಡಿದ್ದಾರೆ.
ಡ್ರಗ್ಸ್ ಜಾಲದ ಹಿಂದಿರುವ ಪ್ರಭಾವಿಗಳನ್ನು ಬಂಧಿಸಿ: ಸರ್ವ ಸಂಘಟನೆಗಳ ಒಕ್ಕೂಟದಿಂದ ಸಿಸಿಬಿಗೆ ದೂರು - ಡ್ರಗ್ಸ್ ಜಾಲ
ಸ್ಯಾಂಡಲ್ವುಡ್ನ ಸಾಕಷ್ಟು ನಟರು ಹಾಗೂ ಮ್ಯೂಜಿಶಿಯನ್ಗಳು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ. ಕೂಡಲೇ ಈ ಜಾಲದ ಹಿಂದಿರುವ ಪ್ರಭಾವಿಗಳನ್ನು ಬಂಧಿಸುವಂತೆ ಸಿಸಿಬಿಗೆ ಸರ್ವ ಸಂಘಟನೆಗಳ ಒಕ್ಕೂಟದಿಂದ ದೂರು ನೀಡಲಾಗಿದೆ.
ಡ್ರಗ್ಸ್ ಜಾಲದಲ್ಲಿ ಪ್ರಭಾವಿಗಳು, ಸಿನಿಮಾ ನಟರು, ಮ್ಯೂಜಿಶಿಯನ್ಸ್ ಹೀಗೆ ಇನ್ನೂ ಹಲವಾರು ಜನ ಭಾಗಿಯಾಗಿದ್ದಾರೆ. ಎನ್ಸಿಬಿ ತಂಡವವು ಡ್ರಗ್ಸ್ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ ಇರುವುದು ಪತ್ತೆಯಾಗಿದೆ ಎಂದರು.
ಸ್ಯಾಂಡಲ್ವುಡ್ನ ಸಾಕಷ್ಟು ನಟರು ಹಾಗೂ ಮ್ಯೂಜಿಶಿಯನ್ಗಳು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎಂದು ಕೆಲ ನಟರು ಹೇಳಿಕೆ ಕೊಡುತ್ತಿದ್ದಾರೆ. ಆದ್ದರಿಂದ ಇದರ ಹಿಂದೆ ಯಾರೇ ಪ್ರಭಾವಿಗಳಿದ್ದರೂ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಬೆಂಗಳೂರು ಮತ್ತು ಕರ್ನಾಟಕವನ್ನು ಡ್ರಗ್ಸ್ ಜಾಲದಿಂದ ಮುಕ್ತಗೊಳಿಸಬೇಕೆಂದು ಸರ್ವ ಸಂಘಟನೆಗಗಳ ಒಕ್ಕೂಟ ಮನವಿ ಮಾಡಿದೆ.