ಕರ್ನಾಟಕ

karnataka

ETV Bharat / state

ಮದ್ಯದ ಮೇಲಿನ ಸುಂಕ ಹೆಚ್ಚಿಸಿ ಕೈಸುಟ್ಟುಕೊಂಡ ರಾಜ್ಯ ಸರ್ಕಾರ - alcohol price increase

ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಮೇ 4ರಂದು ಅನುವು ಮಾಡಿಕೊಟ್ಟಿದ್ದು, ಮೊದಲ ದಿನವೇ ರಾಜ್ಯದಲ್ಲಿ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು. ಎರಡನೇ ದಿನ ಅದರ ಪ್ರಮಾಣ ಮೂರು ಪಟ್ಟು ಹೆಚ್ಚಾಗಿ, 197 ಕೋಟಿ ರೂ.ಗೆ ತಲುಪಿತ್ತು. ಮೇ 13ಕ್ಕೆ 80.29 ಕೋಟಿ ರೂ. ಮೇ 15 ರಂದು ಮತ್ತಷ್ಟು ಕುಸಿತ ಕಂಡು ಕೇವಲ 62.14 ಕೋಟಿ ರೂ.ಯಷ್ಟು ಎಣ್ಣೆ ಮಾತ್ರ ಮಾರಾಟವಾಗಿದೆ.

alcohol   Decline  sales
ಮದ್ಯದ ಬೆಲೆ ಹೆಚ್ಚಳ: ಮಾರಾಟದಲ್ಲಿ ಕುಸಿತ

By

Published : May 21, 2020, 10:11 PM IST

ಬೆಂಗಳೂರು: ರಾಜ್ಯ ಸರ್ಕಾರ ಲಾಕ್​ಡೌನ್​ನಿಂದ ಉಂಟಾದ ತನ್ನ ಖಜಾನೆಯ ಕೊರತೆಯನ್ನು ತುಂಬಿಸಿಕೊಳ್ಳಲು ಇತ್ತೀಚೆಗೆ ಅಬಕಾರಿ ಸುಂಕವನ್ನ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಈಗ ಇದೇ ಆದೇಶ ಸರ್ಕಾರಕ್ಕೆ ಮುಳುವಾಗಿದೆ.

ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಮೇ 4ರಂದು ಅನುವು ಮಾಡಿಕೊಟ್ಟಿದ್ದು, ಮೊದಲ ದಿನವೇ ರಾಜ್ಯದಲ್ಲಿ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು. ಎರಡನೇ ದಿನ ಅದರ ಪ್ರಮಾಣ ಮೂರು ಪಟ್ಟು ಹೆಚ್ಚಾಗಿ, 197 ಕೋಟಿ ರೂ.ಗೆ ತಲುಪಿತ್ತು. ಮೇ 6 ರಂದು 214 ಕೋಟಿ ರೂ. ಮೌಲ್ಯದ ಮದ್ಯ ಖರೀದಿಯಾಗಿತ್ತು. ಆದರೆ, ಮೇ 12ರ ವೇಳೆಗೆ 85.42 ಕೋಟಿ ರೂ.ಗೆ ಕುಸಿದಿದೆ‌. ಮೇ 13ಕ್ಕೆ 80.29 ಕೋಟಿ ರೂ. ಮೇ 15 ರಂದು ಮತ್ತಷ್ಟು ಕುಸಿತ ಕಂಡು ಕೇವಲ 62.14 ಕೋಟಿ ರೂ.ಯಷ್ಟು ಎಣ್ಣೆ ಮಾತ್ರ ಮಾರಾಟವಾಗಿದೆ.


ಕುಸಿತಕ್ಕೆ ಕಾರಣವೇನು?

ಸರ್ಕಾರ ತನ್ನ ಬೊಕ್ಕಸವನ್ನು ಭರ್ತಿ ಮಾಡಿಕೊಳ್ಳಲು ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ 17ರಷ್ಟು ಹೆಚ್ಚಳ ಮಾಡಿತ್ತು. ಇದರಿಂದಾಗಿ ಮದ್ಯ ಮಾರಾಟ ಕುಸಿತ ಕಂಡಿದೆ ಎಂದು ಹೇಳಲಾಗುತ್ತಿದೆ. ಬ್ರಾಂದಿ, ವಿಸ್ಕಿ, ರಮ್‌, ಜಿನ್ ಇತರೆ ಮದ್ಯಕ್ಕೆ ತೆರಿಗೆ ವಿಧಿಸಿದ್ದು, ಬಿಯರ್, ವೈನ್ ಹಾಗೂ ನೀರಾ (ಸೇಂದಿ) ಮತ್ತು ಪೆನ್ನಿಗಳನ್ನು‌ ಹೊರತುಪಡಿಸಿ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಮದ್ಯದ ಬೆಲೆ ಹೆಚ್ಚಾಗಿದೆ.


ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟ ಕುಸಿದಿದೆ. ಕಳೆದ ಸಾಲಿನ ಮಾರಾಟಕ್ಕಿಂತ ಭಾರತೀಯ ಮದ್ಯ ಶೇ. 86.34ರಷ್ಟು ಹಾಗೂ ಬಿಯರ್‌ ಮಾರಾಟ ಶೇ.64.92ರಷ್ಟು ಇಳಿಕೆಯಾಗಿದೆ. ಮೇ 4ರಿಂದ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಿತು. ಕಳೆದ ವರ್ಷದ ಮೇ ತಿಂಗಳ ಮದ್ಯ ಮಾರಾಟ (ಮೇ 16 ರವರೆಗೆ) ಪರಿಗಣಿಸಿದರೂ ಇಂಡಿಯನ್‌ ಮೇಡ್‌ ಮದ್ಯ ಶೇ 0.32ರಷ್ಟು ಹಾಗೂ ಬಿಯರ್‌ ಮಾರಾಟ ಶೇ 63.89ರಷ್ಟು ಕುಸಿತ ಕಂಡುಬಂದಿದೆ.

ಮೇ 4ರಿಂದ 16ರವರೆಗೆ 103 ಕೋಟಿ ರೂ. ಮೌಲ್ಯದ ಬಿಯರ್‌, 1,118 ಕೋಟಿ ರೂ. ಮೌಲ್ಯದ ದೇಶಿಯ ಮದ್ಯ ಸೇರಿ 1,221 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ‌. ಕಳೆದ ವರ್ಷ ಮೇ 1ರಿಂದ 16ರವರೆಗೆ 979 ಕೋಟಿ ರೂ. ಆದಾಯ ಬಂದಿತ್ತು. ಆದರೆ, ಈ ವರ್ಷ ಇದೇ ಸಮಯಕ್ಕೆ 664 ಕೋಟಿ ರೂ. ಮಾತ್ರ ಆದಾಯ ಬಂದಿದೆ. ಕಳೆದ ಬಾರಿಗಿಂತ 314 ಕೋಟಿ ರೂ. ಆದಾಯ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಅಬಕಾರಿ ಇಲಾಖೆಯಿಂದ ರಾಜ್ಯ ಸರ್ಕಾರ 20, 950 ಕೋಟಿ ರೂ. ಆದಾಯ ಗಳಿಸಿದ್ದು, ಈ ವರ್ಷ 22, 700 ಕೋಟಿ ರೂ. ಆದಾಯದ ನಿರೀಕ್ಷೆ ಇದೆ.

ಬಿಯರ್‌ ಖರೀದಿ ಇಳಿಕೆ

ಕಳೆದ ವರ್ಷ ಮೇ ತಿಂಗಳವರೆಗೆ 1.74 ಲಕ್ಷ ಕೇಸ್‌ ಬಾಕ್ಸ್‌ ದೇಶಿಯ ಮದ್ಯ ಹಾಗೂ 1.14 ಲಕ್ಷ ಕೇಸ್‌ ಬಿಯರ್‌ ಮಾರಾಟವಾಗಿತ್ತು. ಆದರೆ, ಈ ವರ್ಷ ಬಿಯರ್‌ 30 ಸಾವಿರ ಕೇಸ್‌ ನಷ್ಟು ಮಾತ್ರ ಮಾರಾಟವಾಗಿದೆ. ಒಟ್ಟು ಮಾರಾಟದಲ್ಲೂ ಬಿಯರ್‌ ಮಾರಾಟ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಮದ್ಯ ಮಾರಾಟದಲ್ಲಿ ಮೊದಲಿದ್ದ ವೇಗ ಈಗ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಆದರೂ ಸರಾಸರಿ ಪ್ರತಿದಿನ 50 ರಿಂದ 60 ಕೋಟಿ ರೂ. ವಹಿವಾಟು ನಡೆಯುತ್ತಿದೆ ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.

ABOUT THE AUTHOR

...view details