ಕರ್ನಾಟಕ

karnataka

ETV Bharat / state

ಸಂಕಷ್ಟದಲ್ಲಿ ಜೆಟ್​ ಏರ್​ವೇಸ್​: ಸಿಬ್ಬಂದಿ ಶಾಂತಿಯುತ ಪ್ರತಿಭಟನೆ - kannada newspaper

ಆರ್ಥಿಕ ಸಂಕಷ್ಟದಲ್ಲಿರುವ ಜೆಟ್​ ಏರ್ವೇಸ್​ ಸಂಸ್ಥೆಯನ್ನು ಸರ್ಕಾರ ಕಾಪಾಡಬೇಕೆಂದು ಸಂಸ್ಥೆಯ ಸಿಬ್ಬಂದಿಗಳ ಒತ್ತಾಯ... ಆರ್ಥಿಕ ನೆರವು ನೀಡಿ ಸಿಬ್ಬಂದಿ ಬದುಕನ್ನು ರಕ್ಷಿಸಬೇಕು ಎಂದು ಟೌನ್​ಹಾಲ್​ ಬಳಿ ಶಾಂತಿಯುತ ಪ್ರತಿಭಟನೆ

ಪ್ರತಿಭಟನೆ

By

Published : Apr 23, 2019, 12:58 PM IST

ಬೆಂಗಳೂರು:ಆರ್ಥಿಕ ಸಂಕಷ್ಟದಲ್ಲಿರುವ ಜೆಟ್​ ಏರ್ವೇಸ್​ ಸಂಸ್ಥೆಯನ್ನು ಸರ್ಕಾರ ಕಾಪಾಡಬೇಕೆಂದು ಒತ್ತಾಯಿಸಿ ಸಂಸ್ಥೆಯ ಸಿಬ್ಬಂದಿ ನಗರದ ಟೌನ್​ಹಾಲ್​ ಬಳಿ ಸಮವಸ್ತ್ರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರು.

ಸರ್ಕಾರ ವಿಧಿಸುತ್ತಿರುವ ಸುಂಕ ಮತ್ತು ಬರುವ ಲಾಭದಲ್ಲಿ ಶೇ. 60ರಷ್ಟನ್ನು ಇಂಧನಕ್ಕಾಗಿ ಖರ್ಚು ಮಾಡಬೇಕಿರುವ ಕಾರಣ ಸಂಸ್ಥೆಯು ನಷ್ಟಕ್ಕೊಳಗಾಗಿದೆ. ಸರ್ಕಾರವು ಈಗ ಸಂಕಷ್ಟದಲ್ಲಿರುವ ಸಂಸ್ಥೆಗೆ ಆರ್ಥಿಕ ನೆರವು ನೀಡಿ ಸಿಬ್ಬಂದಿ ಬದುಕನ್ನು ರಕ್ಷಿಸಬೇಕು ಎಂದು ಉದ್ಯೋಗಿಗಳು ಆಗ್ರಹಿಸಿದರು.

ಸಂಕಷ್ಟದಲ್ಲಿ ಜೆಟ್​ ಏರ್​ವೇಸ್

ಆರ್ಥಿಕವಾಗಿ ನಷ್ಟದಲ್ಲಿರುವ ಅಂತಹ ಜೆಟ್ ಏರ್ವೇಸ್ ಸಂಸ್ಥೆಯು ಕೆಲ ತಿಂಗಳುಗಳಿಂದ, ಸಂಸ್ಥೆಯ ಉದ್ಯೋಗಿಗಳಿಗೆ ಸಂಬಳ ನೀಡಲಾಗದ ಸ್ಥಿತಿ ತಲುಪಿತ್ತು, ಕಳೆದ ಒಂದು ವಾರದಿಂದ ಸಂಪೂರ್ಣ ವಿಮಾನ ಯಾನವನ್ನು ಸ್ಥಗಿತಗೊಳಿಸಿ, ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಉದ್ಯೋಗಗಳನ್ನು ನಡು ನೀರಲ್ಲಿ ಕೈ ಬಿಟ್ಟಿದೆ.

ABOUT THE AUTHOR

...view details