ಕರ್ನಾಟಕ

karnataka

ಯಾರ ಬಳಿ ಜನ ಇದ್ದಾರೆ ಎಂಬುದು ಎಲೆಕ್ಷನ್ ಬಳಿಕ ಗೊತ್ತಾಗಲಿದೆ: ಕೆ.ಜೆ.ಜಾರ್ಜ್

ಕೆ. ಆರ್​. ಪುರಂನ ಕಾಂಗ್ರೆಸ್​ ಅಭ್ಯರ್ಥಿ ನಾರಾಯಣಸ್ವಾಮಿ ಭಟ್ಟರ ಹಳ್ಳಿಯ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಪ್ರಚಾರವನ್ನು ಆರಂಭಿಸಿದ್ರು. ಅವರಿಗೆ ಮಾಜಿ ಸಚಿವ ಕೆ. ಜೆ. ಜಾರ್ಜ್​ ಸಾಥ್​ ನೀಡಿದ್ರು.

By

Published : Nov 22, 2019, 5:34 PM IST

Published : Nov 22, 2019, 5:34 PM IST

ಕಾಂಗ್ರೆಸ್​ ಅಭ್ಯರ್ಥಿ ನಾರಾಯಣಸ್ವಾಮಿಯಿಂದ ಪೂಜೆ

ಬೆಂಗಳೂರು:ಕೆ.ಆರ್.ಪುರಂ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಅವರು‌ ಕೆ.ಆರ್. ಪುರಂನ ಭಟ್ಟರ ಹಳ್ಳಿಯ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು.

ಮಾಜಿ‌ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕೆ.ಆರ್.ಪುರಂನಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ನಮ್ಮ ಅಭ್ಯರ್ಥಿ ಪರ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆ.ಆರ್.ಪುರಂನಲ್ಲಿ ಕಾಂಗ್ರೆಸ್ ಈ ಬಾರಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು‌.

ಕಾಂಗ್ರೆಸ್​​ಗೆ ಟೇಬಲ್ ಹಾಕಲು ಜನ ಇಲ್ಲ ಎಂಬ ಸಚಿವ ಆರ್. ಅಶೋಕ್ ಹೇಳಿಕೆಗೆ ಕಿಡಿಕಾರಿದ ಅವರು ಅಶೋಕ್ ಅವರು ಹಗಲು ಕನಸು ಕಾಣುತ್ತಿದ್ದಾರೆ. ಮುಂದಿನ ತಿಂಗಳು 9ರಂದು ಎಲ್ಲವೂ ಗೊತ್ತಾಗಲಿದೆ. ಕಾಂಗ್ರೆಸ್​​ಗೆ ಜನ ಇದ್ದರಾ? ಬಿಜೆಪಿ ಬಳಿ ಜನ ಇದ್ದರಾ ಅಂತ. ಆಗ ಅಶೋಕ್ ಕನಸು‌‌ ಕನಸಾಗಿ ಉಳಿಯುತ್ತೆ ಎಂದರು.

ಕಾಂಗ್ರೆಸ್​ ಅಭ್ಯರ್ಥಿ ನಾರಾಯಣಸ್ವಾಮಿಯಿಂದ ಪೂಜೆ

ಕಾಂಗ್ರೆಸ್​​ನ ಎಲ್ಲಾ ನಾಯಕರು ಒಟ್ಟಾಗಿ ಇದ್ದೇವೆ. ಯಾವುದೇ ಭಿನ್ನಾಭಿಪ್ರಾಯ ನಮ್ಮಲ್ಲಿ ಇಲ್ಲ. ಇಡೀ ಕಾಂಗ್ರೆಸ್ ನಾರಾಯಣಸ್ವಾಮಿ ಪರ ಇದ್ದಾರೆ. ಕಾಂಗ್ರೆಸ್​ನಲ್ಲಿ ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ.‌ ಬಿಜೆಪಿ ಅವರ ಮಾತು ಕೇಳಬೇಡಿ. ಚುನಾವಣಾ ಫಲಿತಾಂಶ ಬಂದ ನಂತ ಬಿಜೆಪಿ ಸರ್ಕಾರವೇ ಬಿದ್ದು ಹೋಗಲಿದೆ ಎಂದು ಭವಿಷ್ಯ ನುಡಿದ್ರು.

ಕ್ಷೇತ್ರದ ಅಭ್ಯರ್ಥಿ ನಾರಾಯಣಸ್ವಾಮಿ ಮಾತನಾಡಿ ಕಾಂಗ್ರೆಸ್​ಗೆ ಅಲ್ಲ, ಬಿಜೆಪಿಗೆ ಟೇಬಲ್ ಹಾಕಲು ಜನರಿಲ್ಲ. ಎರಡು ಚುನಾವಣೆಯಲ್ಲಿ ಬಿಜೆಪಿ ಸೋತಿತ್ತು. ಅವರ ಅನುಭವವನ್ನು ಅಶೋಕ್ ಹೇಳಿಕೊಂಡಿದ್ದಾರೆ.‌ ಅವರಿಗೆ ಟೇಬಲ್ ಹಾಕಲು ಜನರು ಇರಲಿಲ್ಲ. ಕೆ.ಆರ್. ಪುರಂನಲ್ಲಿ ಕಾಂಗ್ರೆಸ್ ಅಲೆ ಎದ್ದಿದೆ. ಡಿಸೆಂಬರ್ 9 ಕ್ಕೆ ಜನರು ಬಿಜೆಪಿಯವರಿಗೆ ಉತ್ತರ ಕೊಡ್ತಾರೆ ಎಂದರು.

ABOUT THE AUTHOR

...view details