ಆನೇಕಲ್: ಎರಡು ದಿನದಿಂದ ಉಟ್ಟ ಬಟ್ಟೆಯಲ್ಲಿದ್ದ ನಟಿ ರಾಗಿಣಿಗೆ ಇಂದು ಹೊಸ ಬಟ್ಟೆ ತೊಡಲು ಅವಕಾಶ ಕಲ್ಪಿಸಲಾಗಿದೆ.
ಜೈಲುವಾಸ ತಂದಿಟ್ಟ ಸಂಕಷ್ಟ... ಬೆನ್ನು ನೋವಿನಿಂದ ಬಳಲಿದ ರಾಗಿಣಿ - ragini is in jail
ಎರಡು ದಿನದಿಂದ ಉಟ್ಟ ಬಟ್ಟೆಯಲ್ಲಿದ್ದ ನಟಿ ರಾಗಿಣಿಗೆ ನಿನ್ನೆ ರಾತ್ರಿ ಅಧಿಕಾರಿಗಳೇ ಒಂದು ಜೊತೆ ಬಟ್ಟೆ ತಂದು ಕೊಟ್ಟಿದ್ದಾರೆ.
ಜೈಲುವಾಸ ತಂದಿಟ್ಟ ಸಂಕಷ್ಟ...ಬೆನ್ನು ನೋವಿನಿಂದ ಬಳಲಿದ ರಾಗಿಣಿ
ಜೈಲಿಗೆ ಬಂದಾಗ ನಟಿ ರಾಗಿಣಿ ಬಟ್ಟೆ ತರದ ಹಿನ್ನೆಲೆ ನಿನ್ನೆ ಪೋಷಕರೇ ಬಟ್ಟೆ ತಂದಿದ್ದು, ಜೈಲಿನ ಅಧಿಕಾರಿಗಳು ವಾಪಸ್ ಕಳುಹಿಸಿದ್ದರು. ಎರಡು ದಿನದಿಂದ ಉಟ್ಟ ಬಟ್ಟೆಯಲ್ಲಿದ್ದ ನಟಿ ರಾಗಿಣಿ ಜೈಲಿನ ಅಧಿಕಾರಿಗಳಿಗೆ ಬಟ್ಟೆ ಬೇಕು ಎಂದು ಮನವಿ ಮಾಡಿದ್ದರು.
ಹಾಗಾಗಿ, ರಾತ್ರಿ ಅಧಿಕಾರಿಗಳೇ ಒಂದು ಜೊತೆ ಬಟ್ಟೆ ತಂದು ಕೊಟ್ಟಿದ್ದಾರೆ. ಇಂದೂ ಕೂಡ ಬೆನ್ನು ನೋವಿನಿಂದ ಚೇತರಿಸಿಕೊಳ್ಳದೆ ಸುಸ್ತಾಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.