ಬೆಂಗಳೂರು:ಕೊರೊನಾ ಮಹಾಮಾರಿಯನ್ನ ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ಡೌನ್ ಹೇರಿ ಸದ್ಯ ಸಡಿಲಿಕೆ ಮಾಡಿದೆ. ಹೀಗಾಗಿ ನಗರದಲ್ಲಿ ವಾಹನ ಸವಾರರ ಓಡಾಟ ಎಂದಿನಂತೆ ನಡೆಯುತ್ತಿದೆ.
ಇದರ ನಡುವೆ ರಾಜ್ಯದಲ್ಲಿ ಲಿಕ್ಕರ್ ಮಾರಾಟಕ್ಕೆ ಅನುಮತಿಯನ್ನ ನೀಡಿರುವುದರಿಂದ ಜನರ ಓಡಾಟ ನಡುವೆ ಜನರು ಮದ್ಯ ಖರೀದಿ ಮಾಡಿ ಬಾರ್ಗಳಲ್ಲೇ ಕುಡಿದು ರಸ್ತೆಗಳಲ್ಲಿ ಬಿಳೋದು ಹಾಗೂ ರಸ್ತೆ ನಿಯಮ ಉಲ್ಲಂಘನೆ ಮಾಡ್ತಿದ್ದಾರೆ.
ಪೊಲೀಸರು ಸಾರ್ವಜನಿಕರ ಸಂಚಾರ ನಿಯಮ ಪಾಲನೆಗೆ ಒತ್ತು ನೀಡುತ್ತಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಪೊಲೀಸರಿಗೆ ಯಾವುದೇ ರೀತಿಯಾದ ಮುಂಜಾಗೃತ ಕ್ರಮವನ್ನ ಮಾಡಲು ಆಗದ ಪರಿಸ್ಥಿತಿಯಲ್ಲಿದ್ದಾರೆ.
ಕೊರೊನಾ ಸೋಂಕು ಬಂದಾಗಿನಿಂದ ಕುಡಿದು ವಾಹನ ಚಲಾಯಿಸುವವರ ಪರೀಕ್ಷೆ ನಡೆಸಲಾಗುತ್ತಿಲ್ಲ. ಹೀಗಾಗಿ ವಾಹನ ಸವಾರರು ರಾತ್ರಿ, ಹಗಲೆನ್ನದೇ ಕುಡಿದು ವಾಹನಗಳನ್ನ ಚಾಲನೆ ಮಾಡಿ ರಸ್ತೆ ಅಪಘಾತಕ್ಕೆ ತುತ್ತಾಗ್ತಿದ್ದಾರೆ.
ಇದುವರೆವಿಗೂ ನಗರದಲ್ಲಿ ಲಾಕ್ಡೌನ್ ಸಡಿಲಿಕೆಯಾದ ನಂತರ 608 ರಸ್ತೆ ಅಪಘಾತದ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಬಹುತೇಕವಾಗಿ ಕುಡಿದು ವಾಹನ ಚಾಲನೆ ಮಾಡಿದವರ ಸಂಖ್ಯೆಯೇ ಹೆಚ್ಚಾಗಿದೆ.
ಸದ್ಯ ಕೊರೊನಾ ಮುಗಿಯುವವರೆಗೆ ರಸ್ತೆಯ ಬದಿಗಳಲ್ಲಿ, ರಸ್ತೆಯ ಸಿಗ್ನಲ್ ಬಳಿ ಪೊಲೀಸರು ಕುಡಿದು ವಾಹನ ಚಾಲನೆ ಮಾಡೋರನ್ನ ಚೆಕ್ಕಿಂಗ್ ಮಾಡದೆ ಇರೋದಕ್ಕೆ ನಿರ್ಧಾರ ಮಾಡಿದ್ದಾರೆ. ಆದರೆ ನಿಮ್ಮ ಜಾಗೃತಿಯಿಂದ ನೀವು ಇರೋದು ಮಾತ್ರ ಬಹಳ ಅಗತ್ಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.