ಬೆಂಗಳೂರು:ಬಿಬಿಎಂಪಿಯ ಹಲವು ಕಚೇರಿಗಳಿಗೆ ಬುಧವಾರವೂ ಕೂಡ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ದಾಳಿ ಮುಂದುವರಿದಿದೆ. ಕೇಂದ್ರ ಕಚೇರಿ ಸೇರಿ ಇತರ ವಿಭಾಗಗಳಲ್ಲಿಯೂ ಕೂಡ ಕಡತಗಳ ಪರಿಶೀಲನೆ ನಡೆಯುತ್ತಿದೆ.
ಬೆಂಗಳೂರಿನ ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ ವಿವಿಧ ವಲಯ ಕಚೇರಿಗಳಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಂಟು ವಲಯಗಳಲ್ಲೂ ಎಸಿಬಿಯ 10 ತಂಡಗಳು ದಾಳಿಗಿಳಿದಿವೆ. ಕಂದಾಯ, ಇಂಜಿನಿಯರಿಂಗ್, ಟಿಡಿಆರ್ ವಿಭಾಗಕ್ಕೆ ಸೇರಿದ ಆಕ್ರಮ ಕಡತಗಳ ಹುಡುಕಾಟ ಮುಂದುವರಿದಿದೆ. ಫೀಲ್ಡ್ ವಿಸಿಟ್ ಮೂಲಕ ಮಾಹಿತಿ ಕಲೆ ಹಾಕಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.