ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಜೂನ್ 15ರಿಂದ ಶಾಲಾ ದಾಖಲಾತಿ ಪ್ರಕ್ರಿಯೆ.. ಜುಲೈ 1ರಿಂದ ಶೈಕ್ಷಣಿಕ ವರ್ಷಾರಂಭ

ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2021-22 ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಅನುವಾಗುವಂತೆ, ಶೈಕ್ಷಣಿಕ ಅವಧಿಗಳು, ರಜಾ ದಿನಗಳು ಮತ್ತು ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ.

ರಾಜ್ಯದಲ್ಲಿ ಜೂನ್ 15ರಿಂದ ದಾಖಲಾತಿ ಪ್ರಕ್ರಿಯೆ
ರಾಜ್ಯದಲ್ಲಿ ಜೂನ್ 15ರಿಂದ ದಾಖಲಾತಿ ಪ್ರಕ್ರಿಯೆ

By

Published : Jun 4, 2021, 5:35 PM IST

ಬೆಂಗಳೂರು:ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2021-22ನೇ ಸಾಲಿನ ಶೈಕ್ಷಣಿಕ ವರ್ಷವನ್ನ ನಿಗದಿಪಡಿಸಲಾಗಿದೆ.‌
ಈ ಹಿಂದೆ ಜೂನ್ 15ರಿಂದ ಪ್ರಾರಂಭಿಸಲು ಸೂಚಿಸಲಾಗಿತ್ತು. ಪ್ರಸ್ತುತ ಕೋವಿಡ್ ಅನ್ನು ನಿಯಂತ್ರಿಸಲು ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಕಾರಣಕ್ಕೆ ಶಾಲಾ ತರಗತಿಗಳನ್ನು ಪ್ರಾರಂಭಿಸಲು ಅವಕಾಶ ಇರುವುದಿಲ್ಲ.

ಹೀಗಾಗಿ, ಪ್ರಸಕ್ತ ತಲೆದೋರಿರುವ ಈ ಸನ್ನಿವೇಶ ಮುಂದುವರೆಯುವ ಸಾಧ್ಯತೆಯನ್ನು ಗಮನದಲ್ಲಿ ಇರಿಸಿಕೊಂಡು ತಾತ್ಕಾಲಿಕವಾಗಿ ಜುಲೈ 01ರಿಂದ ಶಾಲೆಗಳು ಆರಂಭ ಮಾಡಲು ಯೋಜಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2021-22 ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಅನುವಾಗುವಂತೆ, ಶೈಕ್ಷಣಿಕ ಅವಧಿಗಳು, ರಜಾ ದಿನಗಳು ಮತ್ತು ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದ್ದು, ಎಲ್ಲ ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಶಾಲಾ ಕರ್ತವ್ಯ ದಿನಗಳು ಹೀಗಿವೆ
ಮೊದಲನೇ ಅವಧಿ- 1-7-2021 ರಿಂದ‌ 09-10-2021
ಎರಡನೇ ಅವಧಿ - 21-10-2021ರಿಂದ 30-4-2022

ರಜಾ ದಿನಗಳು
ದಸರಾ ರಜೆ- 10-10-2021ರಿಂದ 20-10-2021
ಬೇಸಿಗೆ ರಜೆ- 01-05-2022 ರಿಂದ 28-5-2022

ಜೂನ್ 15ರಿಂದ ಪ್ರವೇಶಾತಿ ಪ್ರಕ್ರಿಯೆ ಆರಂಭ

ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿಗೆ ದಾಖಲಾತಿ ಮತ್ತು ಶುಲ್ಕ ಪಡೆಯುವ ದಿನಾಂಕವನ್ನ ಕೂಡ ನಿಗದಿ ಮಾಡಲಾಗಿದೆ.
ಖಾಸಗಿ ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಪ್ರತಿ ಶೈಕ್ಷಣಿಕ ವರ್ಷದ ಹೊಸ ದಾಖಲಾತಿ ಪ್ರಕ್ರಿಯೆಯು ಈಗ ಪ್ರಾರಂಭವಾಗುತ್ತಿತ್ತು.‌ ಆದರೆ, ಕೋವಿಡ್ ಹಿನ್ನೆಲೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಶಾಲಾ ಕಾಲೇಜುಗಳನ್ನು ನಿಗದಿತ ಸಮಯಕ್ಕೆ ಪ್ರಾರಂಭಿಸಲು ಸಾಧ್ಯವಾಗಿರುವುದಿಲ್ಲ. ಭೌತಿಕವಾಗಿ ಶಾಲೆಗಳ ಪುನರಾರಂಭದ ಕುರಿತು ಅನಿಶ್ಚಿತತೆ ಇರುವುದರಿಂದ ಮಕ್ಕಳನ್ನು ಪರ್ಯಾಯ ಮಾರ್ಗವಾಗಿ ಸಂಪರ್ಕಿಸಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.‌

ಆಗಸ್ಟ್ 31ರ ಒಳಗೆ ದಾಖಲಾತಿ ಅಂತಿಮ

ಆದುದರಿಂದ ಪ್ರಸ್ತುತ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಯೋಜನೆಯಂತೆ ಜುಲೈ-01 ರಿಂದ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಿದ ಹಿನ್ನೆಲೆ ಮಕ್ಕಳ ಶಾಲಾ
ಪ್ರವೇಶ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತಿದೆ.‌ ಶಾಲಾ ದಾಖಲಾತಿಗೆ ತರಗತಿವಾರು ಲಭ್ಯವಿರುವ ಸೀಟುಗಳ ಸಂಖ್ಯೆ, ಪ್ರವೇಶ ಪ್ರಕ್ರಿಯೆ ಪ್ರಕಟಣೆ, ತರಗತಿವಾರು ಪಾವತಿಸಬೇಕಾದ ಶುಲ್ಕದ ವಿವರಗಳನ್ನು ಒಳಗೊಂಡಂತೆ ಶಾಲಾ ಪ್ರವೇಶಕ್ಕೆ ಪೂರಕ ಮಾಹಿತಿಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸೆಬೇಕು. ದಾಖಲಾತಿ ಪ್ರಕ್ರಿಯೆಯನ್ನು ಜೂನ್-15 ರಿಂದ ಪ್ರಾರಂಭಿಸಿ ಆಗಸ್ಟ್-31 ರೊಳಗೆ ಮುಕ್ತಾಯಗೊಳಿಸಬೇಕು.‌ ದಾಖಲಾತಿಗಾಗಿ ಶಾಲೆಯ ಆವರಣದಲ್ಲಿ ಮಕ್ಕಳು ಹಾಗೂ ಪೋಷಕರನ್ನು ಒಗ್ಗೂಡಿಸದಂತೆ ಕೋವಿಡ್ ನಿಯಮ ಪಾಲಿಸಲು ಸೂಚಿಸಲಾಗಿದೆ.

ಅಲ್ಲದೇ ಒಂದು ವೇಳೆ ಶಾಲೆಗಳಲ್ಲಿ ತರಗತಿಗಳನ್ನು ಮಕ್ಕಳಿಗೆ ಭೌತಿಕವಾಗಿ ಪ್ರಾರಂಭಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯ ಶಿಕ್ಷಣ ಮುಖೇನ ಅಂದರೆ ತರಗತಿವಾರು ಆನ್-ಲೈನ್ / ಅಫ್​​​ಲೈನ್ ಶಿಕ್ಷಣವನ್ನು, ದೂರದರ್ಶನ, ಸಂವೇದ, ಬಾನುಲಿ, ಯೂಟ್ಯೂಬ್, ವಾಟ್ಸ್​ಆ್ಯಪ್​, ಡೆಸ್ಕ್ ಟಾಪ್, ಟ್ಯಾಬ್, ಮೊಬೈಲ್ ಇತರ ವಿದ್ಯುನ್ಮಾನ ಸಾಮಗ್ರಿಗಳ ಮುಖೇನ ಮುದ್ರಿತ ಪಾಠಗಳನ್ನು ಪ್ರಸಾರ ಮಾಡುವುದು, ಅಗತ್ಯಾನುಸಾರ ದೀಕ್ಷಾ ಪೋರ್ಟಲ್ ನಲ್ಲಿ ಲಭ್ಯವಿರುವ ಪಾಠಗಳನ್ನು / ಚಟುವಟಿಕೆಗಳನ್ನು ಮತ್ತು ವರ್ಕ್ ಬುಕ್ / ವರ್ಕ್ ಶೀಟ್ ಮತ್ತು ಸ್ವಕಲಿಕೆ ಸಾಮಗ್ರಿ ಬಳಸಿಕೊಂಡು ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಮುಂದುವರೆಸಬಹುದು ಎಂದು ಸೂಚಿಸಲಾಗಿದೆ.

ABOUT THE AUTHOR

...view details