ಕರ್ನಾಟಕ

karnataka

ETV Bharat / state

ಏರ್​ಏಷ್ಯಾ ವಿಮಾನದಲ್ಲಿ ಹೈಡ್ರಾಮಾ.. ಲ್ಯಾಂಡಿಂಗ್ ವೇಳೆ ಬೆತ್ತಲಾದ ಪಾನಮತ್ತ ಪ್ರಯಾಣಿಕ! - ವಿಮಾನದ ಕ್ಯಾಬಿನ್ ಸಿಬ್ಬಂದಿ

ವಿಮಾನ ಲ್ಯಾಂಡಿಂಗ್​ ಆಗುವ ಸಮಯದಲ್ಲಿ ಪ್ರಯಾಣಿಕನೊಬ್ಬ ವಿಮಾನದ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಲೈಫ್ ಜಾಕೆಟ್​ಗೆ ಸಂಬಂಧಿಸಿದಂತೆ ಜಗಳ ಮಾಡಿದ್ದಾನೆ, ಜಗಳ ವಿಪರೀತಕ್ಕೆ ಹೋಗಿ ಪ್ರಯಾಣಿಕ ತಾನು ಧರಿಸಿದ್ದ ಎಲ್ಲಾ ಬಟ್ಟೆಗಳನ್ನು ಕಳಚಿ ಅಸಭ್ಯ ವರ್ತನೆ ತೋರಿಸಿದ್ದಾನೆ.

A passenger who turns naked on board at AIR Asia flight
ಏರ್​ಏಷ್ಯಾ ವಿಮಾನದಲ್ಲಿ ಹೈಡ್ರಾಮಾ

By

Published : Apr 9, 2021, 10:05 PM IST

Updated : Apr 9, 2021, 10:36 PM IST

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟ ಏರ್ ಏಷ್ಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಮದ್ಯಪಾನ ಮಾಡಿ ರಾದ್ಧಾಂತ ಮಾಡಿರುವ ಘಟನೆ ನಡೆದಿದೆ.

ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಸಿಬ್ಬಂದಿ ಜೊತೆ ಜಗಳವಾಡಿದ್ದು, ಬಟ್ಟೆ ಕಳಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಏಪ್ರಿಲ್ 6ರಂದು ಈ ಘಟನೆ ನಡೆದಿದ್ದು, ಏರ್ ಏಷ್ಯಾ ಸಂಸ್ಧೆಯ ಐ 5-722 ವಿಮಾನ ಬೆಳಗಿನ ಜಾವ 12.46ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಬೆಳಗ್ಗೆ 3.21ಕ್ಕೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.

ವಿಮಾನ ಲ್ಯಾಂಡಿಂಗ್​ ಆಗುವ ಸಮಯದಲ್ಲಿ ಪ್ರಯಾಣಿಕನೊಬ್ಬ ವಿಮಾನದ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಲೈಫ್ ಜಾಕೆಟ್​ಗೆ ಸಂಬಂಧಿಸಿದಂತೆ ಜಗಳ ಮಾಡಿದ್ದಾನೆ. ಜಗಳ ವಿಪರೀತಕ್ಕೆ ಹೋಗಿ ಪ್ರಯಾಣಿಕ ತಾನು ಧರಿಸಿದ್ದ ಎಲ್ಲ ಬಟ್ಟೆಗಳನ್ನು ಕಳಚಿ ಅಸಭ್ಯ ವರ್ತನೆ ತೋರಿಸಿದ್ದಾನೆ. ಸಹ ಪ್ರಯಾಣಿಕರು ಆತನನ್ನು ಸಮಾಧಾನ ಪಡಿಸಿದ್ದಾರೆ.

ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ ತೋರಿದ ಪ್ರಯಾಣಿಕನನ್ನ ದೆಹಲಿ ಪೊಲೀಸರ ವಶಕ್ಕೆ ನೀಡಲಾಗಿತ್ತು.

ಇದನ್ನೂ ಓದಿ:ಜ್ಯೂಸ್​ ಕುಡಿಯೋದಕ್ಕಾಗಿ ಕೊರೊನಾ ರೋಗಿಯಿದ್ದ ಆ್ಯಂಬುಲೆನ್ಸ್ ರಸ್ತೆಯಲ್ಲೇ ನಿಲ್ಲಿಸಿದ ಸಿಬ್ಬಂದಿ!!

Last Updated : Apr 9, 2021, 10:36 PM IST

ABOUT THE AUTHOR

...view details