ಕರ್ನಾಟಕ

karnataka

ETV Bharat / state

ಆನೇಕಲ್​: ನಾಪತ್ತೆಯಾಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ - A missing boy: found dead in a lake

ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ನೀರು ಪಾಲಾದ ಬಾಲಕನನ್ನು ಸರ್ಜಾಪುರದ ಸಂತೋಷ ಎಂದು ಗುರುತಿಸಲಾಗಿದೆ.

a-missing-boy-found-dead-in-a-lake
ನಾಪತ್ತೆಯಾಗಿದ್ದ ಬಾಲಕ : ಕೆರೆಯಲ್ಲಿ ಶವವಾಗಿ ಪತ್ತೆ

By

Published : Mar 27, 2022, 10:45 PM IST

ಆನೇಕಲ್ /ಬೆಂಗಳೂರು: ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸರ್ಜಾಪುರದ ದೊಡ್ಡ ಕೆರೆಯಲ್ಲಿ ನಡೆದಿದೆ. ನೀರು ಪಾಲಾದ ಬಾಲಕನನ್ನು ಸರ್ಜಾಪುರದ ಸಂತೋಷ(13) ಎಂದು ಗುರುತಿಸಲಾಗಿದೆ. ಎಂದಿನಂತೆ ಶಾಲೆ ಮುಗಿಸಿ ಗೆಳೆಯರೊಂದಿಗೆ ಕೆರೆಗೆ ಈಜಾಡಲು ಹೋಗಿ ನೀರು ಪಾಲಾಗಿದ್ದಾನೆ.

ಸರ್ಜಾಪುರ‌ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂತೋಷ್, ಶನಿವಾರ ಎಂದಿನಂತೆ ಶಾಲೆ ಮುಗಿಸಿ ಮನೆಗೆ ಬಂದು ಸ್ನೇಹಿತರ ಜೊತೆಗೂಡಿ ಸರ್ಜಾಪುರ‌ದ ದೊಡ್ಡಕೆರೆಗೆ ಈಜಲು ಹೋಗಿದ್ದಾನೆ. ಹೋದ ಬಾಲಕ ಮನೆಗೆ ಬಾರದಿದ್ದಾಗ ಗಾಬರಿಗೊಂಡ ಬಾಲಕನ ಪೋಷಕರು ಹಲವು ಕಡೆ ಹುಡುಕಾಟ ನಡೆಸಿದ್ದರು. ಬಳಿಕ ಕೆರೆಯ ಬಳಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

ನಾಪತ್ತೆಯಾಗಿದ್ದ ಬಾಲಕ, ಕೆರೆಯಲ್ಲಿ ಶವವಾಗಿ ಪತ್ತೆ

ಮೃತ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸರ್ಜಾಪುರ ಪೊಲೀಸ್ ಇನ್ಸ್​ಪೆಕ್ಟರ್ ರಾಘವೇಂದ್ರ ಇಂಬ್ರಾಪುರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಓದಿ :ಚಾಮರಾಜನಗರದ ಗೋಪಾಲಸ್ವಾಮಿ ಜಾತ್ರೆಗೂ ಕಾಲಿಟ್ಟ ವ್ಯಾಪಾರ ನಿರ್ಬಂಧ ವಿವಾದ

ABOUT THE AUTHOR

...view details