ಕರ್ನಾಟಕ

karnataka

ETV Bharat / state

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹೃದಯಾಘಾತ; ಕುಳಿತ ಸೀಟ್​ನಲ್ಲಿಯೇ ಸಾವು - ಯಶವಂತಪುರ ರೈಲ್ವೇ ನಿಲ್ದಾಣ

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹೃದಯಾಘಾತ.. ಕುಳಿತ ಸೀಟ್​ನಲ್ಲಿಯೇ ಪ್ರಾಣಬಿಟ್ಟ ಕೇರಳದಿಂದ ಆಗಮಿಸಿದ ವ್ಯಕ್ತಿ..

man died due to heart attack in BMTC bus  man died due to heart attack  Bengaluru crime news  Lover knife attack on girlfriend  ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹೃದಯಾಘಾತ  ಕುಳಿತ ಸೀಟ್​ನಲ್ಲಿಯೇ ಸಾವು  ಪ್ರಾಣಬಿಟ್ಟ ಕೇರಳದಿಂದ ಆಗಮಿಸಿದ ವ್ಯಕ್ತಿ  ಬಿಎಂಟಿಸಿ ಬಸ್​ನಲ್ಲಿ​ ವ್ಯಕ್ತಿ ಸಾವು  ಬ್ರೇಕಪ್ ಎಂದಿದಕ್ಕೆ ಚಾಕುವಿನಿಂದ ಹಲ್ಲೆ‌  ಯಶವಂತಪುರ ರೈಲ್ವೇ ನಿಲ್ದಾಣ  ಬಸ್ ಹತ್ತಿ ಮೆಜೆಸ್ಟಿಕ್‌ ಕಡೆಗೆ ಪ್ರಯಾಣ
ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹೃದಯಾಘಾತ

By

Published : Mar 8, 2023, 11:09 PM IST

ಬೆಂಗಳೂರು:ಎರಡು ಪ್ರತ್ಯೇಕ ಘಟನೆಯಲ್ಲಿ ಒಬ್ಬ ವ್ಯಕ್ತಿ ಪ್ರಯಾಣಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ಪ್ರಾಣ ಬಿಟ್ಟರೇ, ಇನ್ನೊಬ್ಬ ಯುವಕ ತನ್ನ ಪ್ರೇಮಿ ಬ್ರೇಕಪ್​ ಹೇಳಿದಕ್ಕೆ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಬಿಎಂಟಿಸಿ ಬಸ್​ನಲ್ಲಿ​ ವ್ಯಕ್ತಿ ಸಾವು:ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಕುಳಿತ ಸೀಟ್​ನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಗರದ ಮಂತ್ರಿ ಮಾಲ್​ ಬಳಿ ನಡೆದಿದೆ. ಇಂದು ಬೆಳಗ್ಗೆ ಸುಮಾರು 61 ವರ್ಷದ ಅಬ್ದುಲ್ ಖಾದಿರ್ ಅವರು ಕೇರಳದಿಂದ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದರು. ಹತ್ತಿರದ ಬಸ್ ಸ್ಟಾಪ್​ನಲ್ಲಿ ಬಸ್ ಹತ್ತಿ ಮೆಜೆಸ್ಟಿಕ್‌ ಕಡೆಗೆ ಪ್ರಯಾಣಿಸುತ್ತಿದ್ದರು. ಸುಮಾರು 10 ಗಂಟೆಯ ಸಮಯದಲ್ಲಿ ಬಸ್ ಮಂತ್ರಿ ಮಾಲ್ ಬಳಿ ತೆರಳುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಳಿತಿದ್ದ ಸೀಟ್ ಮೇಲೆಯೇ ಕುಸಿದು ಬಿದ್ದಿದ್ದಾರೆ. ಪ್ರಯಾಣಿಕರು ಅವರನ್ನು ನೋಡಿ ಕಂಡಕ್ಟರ್​ಗೆ ಮಾಹಿತಿ ನೀಡಿದರು.

ಬಳಿಕ ಕಂಡಕ್ಟರ್​ ಮತ್ತು ಬಸ್​ ಚಾಲಕ ಆ ವ್ಯಕ್ತಿಯನ್ನು ಕೆಳಗೆ ಮಲಗಿಸಿ ಉಸಿರಾಟ ಪರಿಶೀಲಿಸಿದ್ದಾರೆ. ಆದ್ರೆ ಅವರ ದೇಹದಲ್ಲಿ ಯಾವುದೇ ಚಲನವಲನಗಳು ಕಾಣದ ಹಿನ್ನೆಲೆ ಈ ಮಾಹಿತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಮಾತನಾಡಿ, ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಬಸ್​ನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಮೃತ ದೇಹವನ್ನು ವಿಕ್ಟೊರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬ್ರೇಕಪ್ ಎಂದಿದಕ್ಕೆ ಚಾಕುವಿನಿಂದ ಹಲ್ಲೆ‌: ಬ್ರೇಕಪ್ ಮಾಡಿಕೊಂಡಿದಕ್ಕೆ ಪ್ರೀತಿಸಿದ ಹುಡುಗಿ ಮುಖಕ್ಕೆ ಚಾಕುವಿನಿಂದ ಹಲ್ಲೆ‌ ಮಾಡಿರುವ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕಮ್ಮ‌ ಲೇಔಟ್​ನ ಪಿಜಿಯೊಂದರಲ್ಲಿ ವಾಸವಾಗಿದ್ದ 30 ವರ್ಷದ ಯುವತಿ ಮೇಲೆ ಅವಿನಾಶ್ ಎಂಬಾತ ಹಲ್ಲೆ‌ ಮಾಡಿ ಎಸ್ಕೇಪ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ. ಈ ಘಟನೆ ಮಾರ್ಚ್​ 2ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹಲ್ಲೆಗೊಳಗಾದ ಯುವತಿ ಕಾಲ್ ಸೆಂಟರ್​ವೊಂದರಲ್ಲಿ‌ ಕೆಲಸ ಮಾಡಿಕೊಂಡಿದ್ದಳು. ಆರೋಪಿ ಅವಿನಾಶ್​ನೊಂದಿಗೆ ಕಳೆದ ಎರಡು ವರ್ಷಗಳ ಹಿಂದೆ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ನಂತರ ಇಬ್ಬರು ಲಿವಿಂಗ್ ಟೂ ಗೆದರ್ ಸಂಬಂಧ ಹೊಂದಿದ್ದರು. ಅವಿನಾಶ್ ಪಾರ್ಕ್​ವೊಂದರಲ್ಲಿ ಗಾರ್ಡನ್ ಆಗಿ ಕೆಲಸ‌ ಮಾಡುತ್ತಿದ್ದ. ಇತ್ತೀಚೆಗೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿತ್ತು.‌ ಇದೇ ವಿಚಾರಕ್ಕಾಗಿ ತನ್ನ ಪ್ರಿಯಕರನಿಂದ ಯುವತಿ ಅಂತರ ಕಾಪಾಡಿಕೊಂಡಿದ್ದಳು.

ದಿನ ಕಳೆದಂತೆ ಯುವತಿ ಆತನಿಗೆ ಕರೆ ಹಾಗೂ ಮೇಸೆಜ್ ಮಾಡುವುದನ್ನ ನಿಲ್ಲಿಸಿದ್ದಳು. ಇದರಿಂದ ಕೋಪಗೊಂಡ ಅವಿನಾಶ್ ಮಾರ್ಚ್ 2 ರಂದು ಯುವತಿ ಕೆಲಸ‌ ಮಾಡುವ ಸ್ಥಳಕ್ಕೆ‌ ತೆರಳಿ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಹೀಗಾಗಿ ಯುವತಿ ಕೋಪದಿಂದ ಅವಿನಾಶ್​ಗೆ ನೀನು ನನ್ನೊಂದಿಗೆ ಮಾತನಾಡಬೇಡ..‌ ನಮ್ಮಿಬ್ಬರ ಲವ್​ ಬ್ರೇಕಪ್‌ ಮಾಡಿಕೊಂಡಿದ್ದೇನೆ ಎಂದಿದ್ದಾಳೆ‌.‌‌ ಇದರಿಂದ‌ ಅಕ್ರೋಶಗೊಂಡು ಯುವತಿ ಕೆನ್ನೆಗೆ ಅವಿನಾಶ್​ ಚಾಕುವಿನಿಂದ ಹಲ್ಲೆ‌ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಯುವಕ ಬಂಧನ ಭೀತಿಯಿಂದ‌ ಮೊಬೈಲ್ ಸ್ವಿಚ್ ಆಫ್‌ ಮಾಡಿಕೊಂಡಿದ್ದಾನೆ.

ಈ ಘಟನೆ ಕುರಿತು ಯುವತಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಪರಾರಿಯಾಗಿರುವ ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ABOUT THE AUTHOR

...view details