ಬೆಂಗಳೂರು:ಐಪಿಎಲ್ ಕ್ರಿಕೆಟ್ ವೇಳೆ ಬೆಟ್ಟಿಂಗ್ ಭರ್ಜರಿಯಾಗಿಯೇ ನಡೆಯುತ್ತಿದೆ. ಕೆ.ಆರ್.ಪುರಂನ ಹಳೆ ಮದ್ರಾಸ್ ರಸ್ತೆಯ ಎ2ಬಿ ಹೊಟೇಲ್ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಓರ್ವನನ್ನು ವಿಶೇಷ ವಿಚಾರಣೆ ದಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಐಪಿಎಲ್ ಮ್ಯಾಚ್ ವೇಳೆ ಬೆಟ್ಟಿಂಗ್, ಒಬ್ಬನ ಅರೆಸ್ಟ್
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಬಂಧಿತನಾದ ಆರೋಪಿ
ಬಂಧಿತ ಆರೋಪಿಯ ಹೆಸರು ಹೆಚ್.ವಿ.ಚೌಡೇಗೌಡ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಈ ಜೂಜಾಟ ನಡೆಯುತ್ತಿತ್ತು. ಬೆಟ್ಟಿಂಗ್ ನೆಪದಲ್ಲಿ ಆರೋಪಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚನೆ ಎಸಗಿರುವುದು ಕಂಡುಬಂದಿದೆ. ಆರೋಪಿಯಿಂದ 6 ಲಕ್ಷ ರೂಪಾಯಿ ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ವಶದಲ್ಲಿರುವ ಹೆಚ್.ವಿ ಚೌಡೇಗೌಡನಿಗೆ ಕೃಷ್ಣಪ್ಪ ಎಂಬ ಬುಕ್ಕಿಯೊಂದಿಗೆ ಸಂಪರ್ಕವಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.