ಕರ್ನಾಟಕ

karnataka

ETV Bharat / state

ಬಿಬಿಎಂಪಿ ನಿರ್ಲಕ್ಷ್ಯ: ಕೋವಿಡ್​ಗೆ ಚಿಕಿತ್ಸೆ ಸಿಗದೆ ಮನೆಯಲ್ಲೇ ನರಳಿ ಪ್ರಾಣಬಿಟ್ಟ ವ್ಯಕ್ತಿ - ಕೊರೊನಾ ಇದೆ ಆಸ್ಪತ್ರೆಗೆ ದಾಖಲಿಸಿ

ಕೊರೊನಾ ಇದೆ ಆಸ್ಪತ್ರೆಗೆ ದಾಖಲಿಸಿ ಎಂದು ಬಿಬಿಎಂಪಿಗೆ ಮನವಿ ಮಾಡಿದ್ರೂ ಪಾಲಿಕೆ ಬಂದಿಲ್ಲ. ಆರೋಗ್ಯ ಅಧಿಕಾರಿಗಳು ಕೂಡ ನಮಗೆ ವರದಿ ಬಂದಿಲ್ಲ, ಮಾಹಿತಿ ಇಲ್ಲ ಎಂದು ನಿರ್ಲಕ್ಷಿಸಿದ್ದಾರೆ. ಇದೇ ಚಿಂತೆಯಲ್ಲಿ, ಕಿಡ್ನಿ ಸಮಸ್ಯೆಯಿಂದಲೂ ಬಳಲುತ್ತಿದ್ದ ವ್ಯಕ್ತಿ ಮಧ್ಯಾಹ್ನ 1:30ಕ್ಕೆ ಮೃತಪಟ್ಟಿದ್ದಾರೆ.

ಬಿಬಿಎಂಪಿ ನಿರ್ಲಕ್ಷ್ಯ
ಬಿಬಿಎಂಪಿ ನಿರ್ಲಕ್ಷ್ಯ

By

Published : Jul 3, 2020, 6:59 PM IST

ಬೆಂಗಳೂರು:ಬಿಬಿಎಂಪಿಯ ಅಮಾನವೀಯ ನಡೆ ಮತ್ತೊಮ್ಮೆ ಬಯಲಾಗಿದೆ. ಕೋವಿಡ್​​ ಚಿಕಿತ್ಸೆಗಾಗಿ ಮನವಿ ಮಾಡಿದ್ರೂ ಪಾಲಿಕೆಯ ನಿರ್ಲಕ್ಷ್ಯದಿಂದ ಚಿಕಿತ್ಸೆ ಸಿಗದೇ 61ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಕಲಾಸಿಪಾಳ್ಯ ಡಿಸ್ಪೆನ್ಸರಿ ರಸ್ತೆ ಹಿಂಭಾಗದ 61ವರ್ಷದ ನಿವಾಸಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಆಸ್ಪತ್ರೆಗೆ ದಾಖಲಿಸಿ ಎಂದು ಬಿಬಿಎಂಪಿಗೆ ಮನವಿ ಮಾಡಿದ್ರೂ ಪಾಲಿಕೆ ಬಂದಿಲ್ಲ. ಆರೋಗ್ಯ ಅಧಿಕಾರಿಗಳು ಕೂಡ ನಮಗೆ ವರದಿ ಬಂದಿಲ್ಲ, ಮಾಹಿತಿ ಇಲ್ಲ ಎಂದು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದು ಇದೇ ಚಿಂತೆಯಲ್ಲಿ, ಕಿಡ್ನಿ ಸಮಸ್ಯೆಯಿಂದಲೂ ಬಳಲುತ್ತಿದ್ದ ವ್ಯಕ್ತಿ ಮಧ್ಯಾಹ್ನ 1:30ಕ್ಕೆ ಮೃತಪಟ್ಟಿದ್ದಾರೆ.

ತಂಗಿಯ ಜೊತೆ ವಾಸವಾಗಿದ್ದ ಮೃತ ಕೋವಿಡ್​​ ರೋಗಿ ಡಯಾಲಿಸಿಸ್​ಗಾಗಿ ರಂಗದೊರೆ ಆಸ್ಪತ್ರೆಗೆ ಹೋಗುತ್ತಿದ್ದರು. ನಾಲ್ಕು ದಿನದ ಹಿಂದೆ ಕೋವಿಡ್ ಟೆಸ್ಟ್ ಮಾಡಿದ್ದರು. ಇಂದು ಬೆಳಗ್ಗೆ ಡಯಾಲಿಸಿಸ್​ಗೆ ಹೋಗಲು ಕರೆ ಮಾಡಿದಾಗ, ಕೋವಿಡ್ ಪಾಸಿಟಿವ್ ಇದೆ ಬರಬೇಡಿ ಎಂದಿದ್ದರು. ಇದೇ ಭಯದಲ್ಲಿ ಪಾಲಿಕೆ ಅಧಿಕಾರಿಗಳ‌ನ್ನು ಸಂಪರ್ಕಿಸಿದಾಗ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಪಾಲಿಕೆ ಸದಸ್ಯೆ ಪ್ರತಿಭಾ ಧನರಾಜ್ ಕೂಡಾ ಫೋ‌ನ್ ಕರೆ ಸ್ವೀಕರಿಸಿಲ್ಲ. ಪಾಲಿಕೆ ಸಹಾಯವೂ ಸಿಗದೆ ಕೋವಿಡ್ ಭಯದಲ್ಲೇ ಈ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ. ಸದ್ಯ ಮೃತದೇಹದ ರವಾನೆಗೂ ಬಿಬಿಎಂಪಿ ಬಂದಿಲ್ಲ.

ABOUT THE AUTHOR

...view details