ಕರ್ನಾಟಕ

karnataka

ETV Bharat / state

ಹಳೆ ದಾಖಲೆ ಉಡೀಸ್​ ಮಾಡಿದ ಕಿಲ್ಲರ್​ ಕೊರೊನಾ: ಇಂದು ಒಂದೇ ದಿನ 9860 ಸೋಂಕಿತರು ಪತ್ತೆ

ಇಂದು ಒಂದೇ ದಿನ 9860 ಜನರಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಕಿಲ್ಲರ್​ ಕೊರೊನಾ ಹಳೆಯ ಎಲ್ಲ ದಾಖಲೆಗಳನ್ನು ಮುರಿದಿದೆ. ಇಂದು 113 ಜನರನ್ನ ಬಲಿ ಪಡೆದ ಕೋವಿಡ್​ ವೈರಸ್​ ಮತ್ತೆ ಶತಕದ ಗಡಿ ಮೀರಿದೆ.

9860 new Covid-19 cases in Karnataka
ಕಿಲ್ಲರ್​ ಕೊರೊನಾ

By

Published : Sep 2, 2020, 7:14 PM IST

ಬೆಂಗಳೂರು : ರಾಜ್ಯದಲ್ಲಿ ಮೊದಮೊದಲು ಒಂದಂಕಿಯಿಂದ ಶುರುವಾದ ಸೋಂಕಿತರ ಸಂಖ್ಯೆ ಇಂದು ಸಾವಿರದ ಗಡಿ ದಾಟಿದೆ. ಅತ್ತ ಕಟ್ಟುನಿಟ್ಟಿನ ನಿರ್ಬಂಧ ಒಂದೊಂದಾಗಿ ತೆರವು ಆಗುತ್ತಿದ್ದಂತೆ ಇತ್ತ ಸೋಂಕಿತರ ಸಂಖ್ಯೆ ಸಹ ಹೆಚ್ಚಾಗುತ್ತಿದೆ.

ಕಳೆದ ತಿಂಗಳು ಪೀಕ್ ಲೆವಲ್ ಅಂತ ಹೇಳಲಾಗುತ್ತಿತ್ತು. ಆದರೆ, ಈ ತಿಂಗಳಿನಲ್ಲೂ ಸೋಂಕಿತರ ಸಂಖ್ಯೆಗೆ ಏನು ಕಡಿಮೆ ಆಗಿಲ್ಲ. 6-7-8 ಸಾವಿರದ ವರೆಗೆ ಏರಿಕೆ ಆಗಿರುವ ಸೋಂಕಿತರ ಸಂಖ್ಯೆ ಇದೀಗ ಒಂದೇ ದಿನ 9860 ಜನರಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಹಳೇ ದಾಖಲೆಗಳನ್ನು ಹಿಂದಿಕ್ಕಿದೆ.

ಈವರೆಗಿನ ಅತಿ ಹೆಚ್ಚು ಸೋಂಕಿತರ ಪೈಕಿ ಇದೇ ಮೊದಲ ಸ್ಥಾನದಲ್ಲಿದೆ. ಒಟ್ಟಾರೆ ರಾಜ್ಯದಲ್ಲಿ 3,61,341ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. 6,287 ಜನರು ಗುಣ ಹೊಂದಿದ್ದು 2,60,913 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಕೂಡ ಶತಕ ದಾಟಿದ ಸಾವಿನ ಸಂಖ್ಯೆ 113 ಜನರನ್ನ ಬಲಿ ಪಡೆದಿದೆ. ಈ ಮೂಲಕ ಒಟ್ಟು 5950ಕ್ಕೆ ಜನರು ಈವರೆಗೆ ಮೃತಪಟ್ಟಂತಾಯಿತು. ರಾಜ್ಯದಲ್ಲಿ 94,459 ಸಕ್ರಿಯ ಪ್ರಕರಣಗಳಿದ್ದು 751 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

9 ಸಾವಿರಕ್ಕೂ ಹೆಚ್ಚು ಸೋಂಕಿತರು

  • 27-8-2020- 9386
  • 01-9-2020- 9058
  • 02-9-2020- 9860

ಆ.​ 27 ರಂದು ಮೊದಲ ಬಾರಿಗೆ 9 ಸಾವಿರ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ ಬಳಿಕ ಸೆ. 1 (ಮಂಗಳವಾರ) ಹಾಗೂ ಸೆ. 2 (ಬುಧವಾರ) ರಂದು ಕೂಡ 9 ಸಾವಿರ ಗಡಿದಾಟಿದೆ. ಇಂದು 9860 ಜನರಲ್ಲಿ ಸೋಂಕು ಕಾಣಿಸಿಕೊಂಡಿಜದ್ದು ಮುಂದಿನ ದಿನದಲ್ಲಿ ಈ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

ABOUT THE AUTHOR

...view details