ಕರ್ನಾಟಕ

karnataka

ಬೆಂಗಳೂರಲ್ಲಿ ಒಂದೇ ದಿನ 973 ವಾಹನಗಳು ಜಪ್ತಿ... ಸೂಕ್ತ ದಾಖಲೆ ಒದಗಿಸದಿದ್ರೆ ಹರಾಜು!

By

Published : Apr 28, 2020, 10:29 AM IST

ಬೆಂಗಳೂರಿನಲ್ಲಿ ಸೋಮವಾರ 973 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅನಗತ್ಯವಾಗಿ ಪಾಸ್ ಇಲ್ಲದೇ ಓಡಾಡಿದ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

973 vehicles confiscated in bengaluru
ಬೆಂಗಳೂರಿನಲ್ಲಿ ನಿನ್ನೆ 973 ವಾಹನಗಳು ಜಪ್ತಿ

ಬೆಂಗಳೂರು: ಅನಗತ್ಯ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದು, ನಿನ್ನೆ 973 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಲಾಕ್​​​​​​ಡೌನ್ ಹೇರಿದ ಬಳಿಕ ಅತೀ ಹೆಚ್ಚು ವಾಹನಗಳನ್ನು ನಿನ್ನೆ ಜಪ್ತಿ ಮಾಡಲಾಗಿದೆ.

ಅನಗತ್ಯವಾಗಿ ಪಾಸ್ ಇಲ್ಲದೇ ಓಡಾಡಿದ ವಾಹನಗಳನ್ನು ವಶಕ್ಕೆ ಪಡೆದು ಪೊಲೀಸರು, (NDMA) ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರಿನಾದ್ಯಂತ ಈವರೆಗೆ 46,673 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸದ್ಯ ವಶಪಡಿಸಿಕೊಂಡ ವಾಹನಗಳನ್ನು ಆಯಾ ವ್ಯಾಪ್ತಿಯ ಪೊಲೀಸ್​ ಠಾಣೆ ಹಾಗೂ ಸ್ಥಳೀಯ ಮೈದಾನಗಳಲ್ಲಿ ನಿಲ್ಲಿಸಲಾಗಿದೆ. ಲಾಕೌಡೌನ್ ಮುಗಿದ ನಂತರ ಜಪ್ತಿ ಮಾಡಿದ ವಾಹನಗನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಲಯದ ಆದೇಶದ ಮೇರೆಗೆ ವಾಹನ ಸವಾರರು ಸರಿಯಾದ ದಾಖಲೆಗಳನ್ನು ನೀಡಿದ್ರೆ ಮಾತ್ರ ವಾಹನ ಸವಾರರ ಕೈಗೆ ವಾಹನಗಳು ಸಿಗಲಿವೆ. ಇಲ್ಲದಿದ್ದರೆ ಹರಾಜಿನಲ್ಲಿ ಮಾರಾಟವಾಗಿ ಬೇರೆಯವರ ಪಾಲಾಗಲಿವೆ.

ABOUT THE AUTHOR

...view details