ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ 9 ಸಾವಿರ ಜನರಿಗೆ ತಗುಲಿದ ಕೋವಿಡ್: ಪ್ರತಿ 100ರಲ್ಲಿ 34 ಮಂದಿಗೆ ಸೋಂಕು

ಬೆಂಗಳೂರಿನಲ್ಲಿ 9,601 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಗರದಲ್ಲಿ ಪಾಸಿಟಿವಿಟಿ ಪ್ರಮಾಣ 34.61% ಇದ್ದು, ಮರಣ ಪ್ರಮಾಣ 1.25% ಇದೆ.

9601-tested-positive-in-bengaluru
ಬೆಂಗಳೂರಲ್ಲಿ 9,601 ಜನರಿಗೆ ಕೋವಿಡ್ ಸೋಂಕು

By

Published : May 21, 2021, 8:18 AM IST

ಬೆಂಗಳೂರು: ನಗರದಲ್ಲಿ 9,601 ಜನರಿಗೆ ಕೋವಿಡ್ ಸೋಂಕು ತಗುಲಿದೆ.

ಪ್ರಮುಖವಾಗಿ ಬೊಮ್ಮನಹಳ್ಳಿ 912, ದಾಸರಹಳ್ಳಿ 313, ಬೆಂಗಳೂರು ಪೂರ್ವ 1,207, ಮಹಾದೇವಪುರ 1,707, ಆರ್‌ಆರ್ ನಗರ 613, ಬೆಂಗಳೂರು ದಕ್ಷಿಣ 884, ಬೆಂಗಳೂರು ಪಶ್ಚಿಮ 865, ಯಲಹಂಕದಲ್ಲಿ 657 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.

ನಿನ್ನೆ ನಗರದಲ್ಲಿ 9,409 ಪ್ರಕರಣಗಳು ಪತ್ತೆಯಾಗಿತ್ತು, 289 ಮಂದಿ ಮೃತಪಟ್ಟಿದ್ದರು. ಈವರೆಗೆ 3,06,625 ಸಕ್ರಿಯ ಪ್ರಕರಣಗಳಿವೆ. ಮೇ 19ರಂದು 49,336 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ಪ್ರಮಾಣ 34.61% ಇದ್ದು, ಮರಣ ಪ್ರಮಾಣ 1.25% ಇದೆ.

ಇದನ್ನೂ ಓದಿ:ಪಂಜಾಬ್‌ನ ಮೊಗಾ ಬಳಿ ಮಿಗ್ -21 ಯುದ್ಧ ವಿಮಾನ ಪತನ

ABOUT THE AUTHOR

...view details