ಬೆಂಗಳೂರು:ರಾಜ್ಯದಲ್ಲಿ ಒಟ್ಟು ಮಾಸಾಶನ ಪಡೆಯುತ್ತಿರುವ ದಿವ್ಯಾಂಗ ಜನರ ಸಂಖ್ಯೆ ಬರೋಬ್ಬರಿ 9 ಲಕ್ಷದ 40 ಸಾವಿರದ 65 ರಷ್ಟಿದೆ. ಆದ್ರೆ, ರಾಜ್ಯದ ಎಲ್ಲಾ ದಿವ್ಯಾಂಗ ಜನರಿಗೂ ಮಾಸಾಶನ ಸಿಗುತ್ತಿಲ್ಲ. ಸರ್ಕಾರದ ನಿಯಮಗಳಡಿ ನೋಂದಣಿಗೊಂಡವರಿಗೆ ಮಾತ್ರ ಈ ಸೌಲಭ್ಯ ದೊರೆಯುತ್ತಿದೆ.
ಬ್ಯಾಂಕ್ ಖಾತೆ ಹಾಗೂ ಇ-ಮನಿಯಾರ್ಡರ್ ಮೂಲಕ ಮಾಸಾಶನವನ್ನು ಸಾಮಾನ್ಯವಾಗಿ ಸರ್ಕಾರ ಬಿಡುಗಡೆ ಮಾಡುತ್ತಿದೆ. ಕೆಲವು ಪ್ರಕರಣಗಳಲ್ಲಿ ಫಲಾನುಭವಿಗಳು ಬ್ಯಾಂಕ್ ಖಾತೆಯ ಸರಿಯಾದ ವಿವರ, IFSC ಕೋಡ್, ಪಿನ್ಕೋಡ್ ಮಾಹಿತಿ ನೀಡದಿರುವ ಕಾರಣ, ಖಾತೆ ಚಾಲ್ತಿಯಲ್ಲಿಲ್ಲದೇ ಇರುವುದು, ಬ್ಯಾಂಕ್ ಖಾತೆಯ ಮಾಹಿತಿ ಅಪೂರ್ಣವಾಗಿರುವುದು, ಇಲ್ಲವೇ ತಪ್ಪು ವಿಳಾಸ ನೀಡಿರುವ ಕಾರಣಕ್ಕೆ ಮಾಸಾಶನ ಸಿಗುತ್ತಿಲ್ಲ ಎಂಬುದನ್ನು ಸರ್ಕಾರ ಹೇಳಿದೆ.