ಬೆಂಗಳೂರು:ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ 30ಕ್ಕಿಂತ ಹೆಚ್ಚು ಹಾಸಿಗೆ ಸಾಮರ್ಥ್ಯ ಇರುವ ಖಾಸಗಿ ಆಸ್ಪತ್ರೆಗಳ ಶೇ.80 ರಷ್ಟು ಹಾಸಿಗೆಗಳು ಹಾಗೂ ಐಸಿಯು ಸೌಲಭ್ಯವನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಸೂಚಿಸಿದ್ದಾರೆ. ಅಲ್ಲದೇ ಇಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
ಸಚಿವ ಡಾ. ಕೆ.ಸುಧಾಕರ್ ಪ್ರತಿಕ್ರಿಯೆ ಡಯಾಲಿಸಿಸ್, ಹೆರಿಗೆ ಹಾಗೂ ಮಕ್ಕಳ ವಿಭಾಗ ಹಾಗೂ ಮಾರಣಾಂತಿಕ ಅನಾರೋಗ್ಯದ ತುರ್ತುಚಿಕಿತ್ಸೆಯ ಹಾಸಿಗೆಗಳನ್ನು ಬಳಸಿಕೊಳ್ಳುವುದಿಲ್ಲ. ಉಳಿದಂತೆ ಎಲ್ಲಾ ಹಾಸಿಗೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಿಟ್ಟುಕೊಡಬೇಕು. ಇದರಿಂದ ತಕ್ಷಣವೇ 7000 ಹಾಸಿಗೆಗಳು ಸಿಗುವುದಾಗಿ ಸಚಿವರು ಹೇಳಿದರು.
ಎಲ್ಲಾ ನರ್ಸಿಂಗ್ ಹೋಂಗಳಲ್ಲಿ ಹಾಗೂ 30 ಕ್ಕಿಂತ ಕಡಿಮೆ ಬೆಡ್ ಇರುವ ಆಸ್ಪತ್ರೆಗಳು ನಾನ್- ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಡ್ಡಾಯ. ಎಲ್ಲಾ ವರ್ಗಗಳಲ್ಲಿ ಶೇ.80 ರಷ್ಟು ಹಾಸಿಗೆಗಳು ಖಾಸಗಿ ಆಸ್ಪತ್ರೆಗಳಿಂದ ಸರ್ಕಾರಕ್ಕೆ ಸೆಸ್ನ ಅಡಿಯಲ್ಲಿ ರೋಗಿಗಳಿಗೆ ಉಚಿತವಾಗಿ ಕೊಡುವಂತೆ ಅದೇ ದರದಲ್ಲಿ ಖಾಸಗಿ ಆಸ್ಪತ್ರೆಗಳು ಕೊಡಬೇಕು. ಮೂರ್ನಾಲ್ಕು ದಿನದೊಳಗೆ ಖಾಸಗಿ ಆಸ್ಪತ್ರೆಗಳು ಸಂಪೂರ್ಣ ಹಾಸಿಗೆಗಳನ್ನು ಬಿಟ್ಟುಕೊಡಬೇಕು ಎಂದರು.
ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ನಡೆಸುತ್ತಿದ್ದ ಬಿಎಲ್ ಡಿಇ ವೈದ್ಯಕೀಯ ಕಾಲೇಜು ಸಂಸ್ಥೆಯಲ್ಲಿ ಒಂದು ಬೆಡ್ಗೆ 10 ಸಾವಿರ ರೂ. ನೀಡಲು ನಿಗದಿ ಮಾಡಲಾಗಿತ್ತು. ಆದರೆ ಕೇವಲ 3 ಸಾವಿರ ರೂ. ವೆಚ್ಚದಲ್ಲಿ ಸುರಕ್ಷಾ ಆರೋಗ್ಯ ಟ್ರಸ್ಟ್ಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅದೇ ರೀತಿ ಎಲ್ಲಾ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು.
ಇದನ್ನೂ ಓದಿ:ಖಾಸಗಿ ಆಸ್ಪತ್ರೆಗಳು ಸಹಕಾರ ನೀಡದಿದ್ರೆ ಕಠಿಣ ಕ್ರಮ: ಸಚಿವ ಡಾ.ಸುಧಾಕರ್