ಕರ್ನಾಟಕ

karnataka

ETV Bharat / state

8 ತಿಂಗಳ ನಂತರ ನೆಹರು ತಾರಾಲಯ ರೀ ಓಪನ್​ - ಸರ್ಕಾರದ ಮಾರ್ಗಸೂಚಿಯಂತೆ ಸುರಕ್ಷಿತಾ ಕ್ರಮ ಅನ್ವಯಿಸಿ ನೆಹರು ತಾರಾಲಯ ಓಪನ್

ಲಾಕ್‌ಡೌನ್ ಆದ ಕಾರಣದಿಂದಾಗಿ‌, ಸತತ‌ 8 ತಿಂಗಳ ಕಾಲ‌ ನೆಹರು ತಾರಾಲಯ ಬಂದ್ ಮಾಡಲಾಗಿತ್ತು. ಹೀಗಾಗಿ ತಾರಾಲಯದಿಂದ ಆಯೋಜಿಸಲಾಗಿದ್ದ ಪ್ರದರ್ಶನವೂ ಕೂಡ ರದ್ದಾಗಿತ್ತು. ಇದೀಗ ಎಲ್ಲ ಸುರಕ್ಷತಾ ಕ್ರಮಗಳನ್ನ ತೆಗೆದುಕೊಂಡು ತಾರಾಲಯವನ್ನ ತೆರೆಯಲಾಗಿದೆ.

8 months later Nehru Starlaya Open in Bangalore
8 ತಿಂಗಳ ನಂತರ ನೆಹರು ತಾರಾಲಯ ಓಪನ್​

By

Published : Nov 30, 2020, 8:17 AM IST

Updated : Nov 30, 2020, 9:35 AM IST

ಬೆಂಗಳೂರು: ಪ್ರತಿ ವರ್ಷ ಬೇಸಿಗೆ ರಜೆಯ ಏಪ್ರಿಲ್ ತಿಂಗಳಿನಿಂದ ಮಕ್ಕಳಿಗಾಗಿ ಸೌರ ಮಂಡಲದ ಹಲಾವಾರು ವಿಷಯಗಳನ್ನಿಟ್ಟುಕೊಂಡು ನಗರದ ನೆಹರು ತಾರಾಲಯ ವಿಶೇಷ ಪ್ರದರ್ಶನಗಳನ್ನ ಹಮ್ಮಿಕೊಳ್ಳುತ್ತಿತ್ತು. ಈ ಬಾರಿ ಕೋವಿಡ್​​ ಎಫೆಕ್ಟ್​ನಿಂದ ತಾರಾಲಯ ಬಂದ್​ ಆಗಿದ್ದು, ಈಗ 8 ತಿಂಗಳ ನಂತರ ಸುರಕ್ಷಿತಾ ಕ್ರಮಗಳನ್ನ ತೆಗೆದುಕೊಂಡು ಪುನಾರಂಭಿಸಲಾಗಿದೆ.

8 ತಿಂಗಳ ನಂತರ ನೆಹರು ತಾರಾಲಯ ಓಪನ್​

ಭಾರತದ ಬೇರೆ ಬೇರೆ ರಾಜ್ಯಗಳಿಂದ ಹಾಗೂ ವಿದೇಶದಿಂದ ಕೂಡ ಜನರು ಇಲ್ಲಿಗೆ ಬಂದು, ತಾರಾಲಯದ‌ ವಿಶೇಷತೆಗಳನ್ನ ಅನುಭವಿಸುತ್ತಿದ್ದರು. ಆದರೆ, ಈ ‌ಬಾರಿ ಇಡೀ ಭಾರತವೇ ಲಾಕ್‌ಡೌನ್ ಆದ ಕಾರಣದಿಂದಾಗಿ‌, ಸತತ‌ 8 ತಿಂಗಳ ಕಾಲ‌ ನೆಹರು ತಾರಾಲಯ ಬಂದ್ ಮಾಡಲಾಗಿತ್ತು. ಹೀಗಾಗಿ ತಾರಾಲಯದ ವತಿಯಿಂದ ಆಯೋಜಿಸಲಾಗಿದ್ದ ಪ್ರದರ್ಶನವೂ ಕೂಡ ರದ್ದಾಗಿತ್ತು. ಇದೀಗ ಎಲ್ಲ ಸುರಕ್ಷತಾ ಕ್ರಮಗಳನ್ನ ತೆಗೆದುಕೊಂಡು ತಾರಾಲಯವನ್ನ ತೆರೆಯಲಾಗಿದೆ.

ಇನ್ನು ಇಲ್ಲಿಗೆ ಬರುವ ಪ್ರತಿಯೋಬ್ಬ ವ್ಯಕ್ತಿಯನ್ನ ಪರಿಶೀಲಿಸಿ‌ ನಂತರ ಒಳಗೆ ಪ್ರವೇಶ ನೀಡಲಾಗುತ್ತೆ. ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನ ಕೂಡ ತೆಗೆದುಕೊಳ್ಳಲಾಗಿದೆ. ಇನ್ನು ಪ್ರತಿ ಪ್ರದರ್ಶನದ ನಂತರ ಸ್ಕೈ ಥಿಯೇಟರ್‌ನಲ್ಲಿ ಕುಳಿತ್ತಿದ್ದ ಜನರ ಸೀಟ್‌‌ಗಳನ್ನ ಸ್ಯಾನಿಟೈಸ್ ಮಾಡಲಾಗುತ್ತೆ. ವಿಶೇಷ ಅಂದ್ರೆ ತಾರಾಲಯದ ವಿಜ್ಞಾನ ವನದಲ್ಲಿ ಅಲ್ಲಿ ಇರಿಸಿದ ವಸ್ತುಗಳ ಬಗ್ಗೆ ಮಾಹಿತಿ ನೀಡಲು ಒಬ್ಬ ಗೈಡ್‌ನ್ನ ನೇಮಕ‌ ಮಾಡಲಾಗಿತ್ತು. ಆದರೆ, ಜನರ‌ ಹಿತದೃಷ್ಟಿಯಿಂದಾಗಿ ಕಾಂಟ್ಯಕ್ಟ್‌ಲೆಸ್ ಮಾಹಿತಿ‌ ನೀಡುವ ಸೌಲಭ್ಯವನ್ನ ಕೂಡ ಕಲ್ಪಿಸಲಾಗಿದೆ.

ಓದಿ: ಡಿಸಿ‌-ಶಾಸಕರ ಕಿತ್ತಾಟ ಸಮಸ್ಯೆ ನಾಳೆಯೊಳಗೆ ಬಗೆಹರಿಸುತ್ತೇನೆ.. ಸಚಿವ ಎಸ್ ಟಿ ಸೋಮಶೇಖರ್

ಪ್ರತಿ ವಸ್ತುವಿನ‌ ಬಳಿ ಕ್ಯು‌ಆರ್ ಕೋಡ್ ಇರಿಸಲಾಗಿದ್ದು, ಇಲ್ಲಿಗೆ ಬರುವ ಜನರು‌ ಆ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಸಾಕು ಆ ವೈಜ್ಞಾನಿಕ ವಸ್ತುವಿನ ಬಗ್ಗೆ‌ ಎಲ್ಲಾ ಮಾಹಿತಿ ದೊರೆಯತ್ತದೆ ಹಾಗೂ ಅವುಗಳನ್ನ ಹೇಗೆ‌‌ ಬಳಸಬೇಕು‌ ಎಂಬುದರ ಸೂಚನೆಯನ್ನ ಕೂಡ ನೀಡಲಾಗಿರುತ್ತದೆ.

Last Updated : Nov 30, 2020, 9:35 AM IST

For All Latest Updates

ABOUT THE AUTHOR

...view details