ಬೆಂಗಳೂರು : ನಾನಾ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ರಾಜ್ಯದಲ್ಲಿ ಈಗಾಗಲೇ ಕರ್ನಾಟಕ ಸಾಮಾನ್ಯ ಪರೀಕ್ಷೆ (ಸಿಇಟಿ) ಬರೆದಿರುವ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಭರ್ತಿ ಮಾಡಿಕೊಳ್ಳಲು ನೀಡಿದ್ದ ಅವಕಾಶ ಮುಕ್ತಾಯವಾಗಿದೆ. ಈವರೆಗೆ 62 ಲಕ್ಷ ಸಂಯೋಜಿತವಾಗಿ ಐಚ್ಛಿಕಗಳನ್ನು ದಾಖಲಿಸಲಾಗಿದೆ.
ಆಗಸ್ಟ್ 5ರ ಸಂಜೆಯಿಂದ ಆಗಸ್ಟ್ 8ರವರೆಗೆ ನೀಡಲಾಗಿದ್ದ ಸಂಯೋಜಿತ ಐಚ್ಛಿಕ ದಾಖಲೆ (ಕಂಬೈನ್ಡ್ ಆಪ್ಷನ್ ಎಂಟ್ರಿ) ಮೂಲಕ 1.2 ಲಕ್ಷ ಆಕಾಂಕ್ಷಿಗಳಿಂದ 62 ಲಕ್ಷ ಎಂಟ್ರಿ ದಾಖಲಿಸಿದೆ. ಇದರಲ್ಲಿ ಹೆಚ್ಚಿನ ಎಂಟ್ರಿ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಬಂದಿದೆ. ಒಟ್ಟು ಇಂಜಿನಿಯರಿಂಗ್ ಕೋರ್ಸ್ಗೆ 45 ಲಕ್ಷ, ವೈದ್ಯಕೀಯ ಕೋರ್ಸ್ಗೆ 10 ಲಕ್ಷ, ಕೃಷಿ ವಿಜ್ಞಾನ ಕೋರ್ಸ್ ಗೆ 2.5 ಲಕ್ಷ ಮತ್ತು ಪಶುವೈದ್ಯಕೀಯ ವಿಜ್ಞಾನ ಕೋರ್ಸ್ಗೆ 75,000 ಎಂಟ್ರಿಗಳು ಬಂದಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಮಾಹಿತಿ ನೀಡಿದರು.