ಕರ್ನಾಟಕ

karnataka

ಕೊರೊನಾ ನಿಯಮ ಮೀರಿದವರಿಗೆ ಶಾಕ್ ಕೊಟ್ಟ ಪೊಲೀಸರು​​: ಬೆಂಗಳೂರಲ್ಲಿ 5 ಸಾವಿರ ವಾಹನಗಳು ಜಪ್ತಿ

By

Published : Apr 30, 2021, 3:32 PM IST

ಬೆಂಗಳೂರಿನಲ್ಲಿ 20 ದಿನಗಳ ಅಂತರದಲ್ಲಿ ಕೊರೊನಾ ನಿಯಮ ಮೀರಿ ಬೇಕಾಬಿಟ್ಟಿ ಓಡಾಡುತ್ತಿದ್ದವರಿಂದ 5 ಸಾವಿರಕ್ಕೂ ಹೆಚ್ಚಿನ ವಾಹನಗಳನ್ನು ಜಪ್ತಿ ಮಾಡಿ 2.57 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.

5000 vehicles confiscated in Bangalore  in 20 days
ಬೆಂಗಳೂರಿನಲ್ಲಿ 5 ಸಾವಿರಕ್ಕೂ ವಾಹನಗಳು ಜಪ್ತಿ

ಬೆಂಗಳೂರು: ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ಅನಗತ್ಯ ಓಡಾಟ ಸೇರಿ ರೂಲ್ಸ್ ಬ್ರೇಕ್ ಮಾಡಿದ್ದವರ ಮೇಲೆ‌ ನಗರ ಪೊಲೀಸರು ಕಾನೂನು ಕ್ರಮ ಕೈಗೊಂಡು 20 ದಿನಗಳ ಅಂತರದಲ್ಲಿ 5 ಸಾವಿರಕ್ಕೂ ಅಧಿಕ ವಾಹನಗಳನ್ನು ಸೀಜ್ ಮಾಡಿದ್ದಾರೆ.

ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸಾರ್ವಜನಿಕರಲ್ಲಿ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ ಇದಕ್ಕೆಲ್ಲಾ ಕ್ಯಾರೇ ಎನ್ನದ ಜನರ ಮೇಲೆ ಪೊಲೀಸರು ಬಿಗಿ ಕ್ರಮ‌ ಕೈಗೊಂಡಿದ್ದಾರೆ. ನೈಟ್ ಕರ್ಫ್ಯೂ ಜಾರಿಯಾದ ಏ. 10ರಿಂದ ಇದುವರೆಗೂ ನಗರದಲ್ಲಿ 4632 ಬೈಕ್​ಗಳು, 205 ಆಟೋ ಹಾಗೂ 248 ಕಾರು ಸೇರಿದಂತೆ 5085 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಈ ಅವಧಿಯಲ್ಲಿ‌‌ ನಿಗದಿತ ಸಮಯ ಮೀರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 41 ಹೋಟೆಲ್ ಸೇರಿದಂತೆ ಇನ್ನಿತರ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಶ್ಚಿಮ ವಿಭಾಗದಲ್ಲೇ 1250ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

2.57 ಕೋಟಿ ರೂ. ದಂಡ ಸಂಗ್ರಹ

ಮಾಸ್ಕ್‌ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಗೊಳ್ಳದವರಿಂದ ಏ. 1ರಿಂದ 29ವರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು 1,7362 ಪ್ರಕರಣ ದಾಖಲಿಸಿ 2‌.57 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಹೋಟೆಲ್, ಬೇಕರಿ ಸೇರಿದಂತೆ ಕರ್ಮಷಿಯಲ್ ಶಾಪ್​ಗಳ ಮಾಲೀಕರು ಹಾಗೂ ಸಾರ್ವಜನಿಕ‌ ಪ್ರದೇಶಗಳಲ್ಲಿ ಗುಂಪುಗೂಡಿದವರ ಮೇಲೆ 8691 ಪ್ರಕರಣ ದಾಖಲಿಸಿ 1.97 ಕೋಟಿ ರೂ. ದಂಡ ಹಾಗೂ ಮಾಸ್ಕ್ ಧರಿಸದೆ ರೂಲ್ಸ್ ಬ್ರೇಕ್‌ ಮಾಡಿ‌‌ ಓಡಾಡುತ್ತಿದ್ದವರ ವಿರುದ್ಧ 98,671 ಕೇಸ್​ಗಳನ್ನು ದಾಖಲಿಸಿ 23.79 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details