ಬೆಂಗಳೂರು: ರಾಜ್ಯದಲ್ಲಿಂದು 464 ಮಂದಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,38,865ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 464 ಹೊಸ ಕೊರೊನಾ ಕೇಸ್ ಪತ್ತೆ: ಇಬ್ಬರು ಸೋಂಕಿತರು ಸಾವು - 464 cases found in karnataka
ರಾಜ್ಯದಲ್ಲಿ ಇಂದು ಹೊಸದಾಗಿ 464 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇಬ್ಬರು ಸೋಂಕಿತರು ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ.
ಇಬ್ಬರು ಸೋಂಕಿತರು ಸಾವು
ಇವತ್ತು ಇಬ್ಬರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆಯು 12,213ಕ್ಕೆ ಏರಿದೆ. 547 ಮಂದಿ ಗುಣಮುಖರಾಗಿದ್ದು, 9,20,657 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 5976 ಇದ್ದು, 147 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಕರಣಗಳ ಶೇಕಡಾವಾರು ಪ್ರಮಾಣ 0.63ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.43ರಷ್ಟು ಇದೆ.
ಇದನ್ನೂ ಓದಿ:ಗುಡ್ ನ್ಯೂಸ್: ಜೂನ್ ವೇಳೆಗೆ ಭಾರತದಲ್ಲಿ ಮತ್ತೊಂದು ದೇಶಿ ಕೋವಿಡ್ ಲಸಿಕೆ?