ಬೆಂಗಳೂರು : ರಾಜ್ಯದ ಪ್ರತಿಯೊಬ್ಬರೂ ಬಹುಬೇಗ ಕೊರೊನಾ ಸೋಂಕು ಮರೆಯಾಗಲಿ ಎಂದು ಪ್ರಾರ್ಥಿಸ್ತಿದ್ದಾರೆ. ಆಶಾದಾಯಕ ಬೆಳವಣಿಗೆ ಏನಂದ್ರೇ, ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ. ಈ ಮೊದಲು ನಿತ್ಯ 10 ಸಾವಿರ ಗಡಿದಾಟುತ್ತಿತ್ತು.
ಇಂದು ಒಂದೇ ದಿನ ಸುಮಾರು 1,12,545 ಮಂದಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು. ಇದರಲ್ಲಿ 4,471ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,98,378ಕ್ಕೆ ಏರಿಕೆ ಆಗಿದೆ.
ಸದ್ಯ ಸೋಂಕಿತರ ಸಂಖ್ಯೆಯಷ್ಟೇ ಗುಣಮುಖರಾದವರ ಸಂಖ್ಯೆಯೂ ಏರಿದೆ. ಒಂದೇ ದಿನ 7,153 ಮಂದಿ ಸೇರಿ ಒಟ್ಟು 7,00,737 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ.
ಇಂದು ಕೊರೊನಾಗೆ 52 ಸೋಂಕಿತರು ಬಲಿಯಾಗಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ 10,873 ಜನ ಸಾವನ್ನಪ್ಪಿದ್ದಾರೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ.
ಸದ್ಯ ಒಟ್ಟಾರೆ ರಾಜ್ಯದಲ್ಲಿ 86,749 ಸಕ್ರಿಯ ಪ್ರಕರಣಗಳಿದ್ದು, 935 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 305 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಟ್ಟಿದ್ದಾರೆ. ಕಳೆದ 14 ದಿನಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 4,55,297 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿ 4,23,358 ಇದ್ದಾರೆ. 7 ದಿನಗಳಲ್ಲಿ 73,193 ಜನರು ಹೋಂ ಕ್ವಾರಂಟೈನ್ನಲ್ಲಿದ್ದಾರೆ.
ಬೆಂಗಳೂರಿನಲ್ಲೂಸೋಂಕಿತ ಪ್ರಕರಣಇಳಿಕೆ..ರಾಜಧಾನಿ ಬೆಂಗಳೂರಿನಲ್ಲಿ 2,251ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ರಾಜ್ಯದ ರಾಜಧಾನಿಯಲ್ಲಿ 3,23,305ಕ್ಕೆ ಸೋಂಕಿತರ ಸಂಖ್ಯೆ ಏರಿದೆ.
ಇಂದು ಬೆಂಗಳೂರಿನಲ್ಲಿ 3,005 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 2,63,607 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ನಗರದಲ್ಲಿ 55,983 ಸಕ್ರಿಯ ಪ್ರಕರಣಗಳಿವೆ. ಇಂದು 26 ಸೋಂಕಿತರು ಚಿಕಿತ್ಸೆ ಫಲಿಸದೇ ಮೃತರಾಗಿದ್ದು, ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3,714ಕ್ಕೆ ಏರಿಕೆಯಾಗಿದೆ.